“ಮೃತ್ಯುಂಜಯ” ಸಿನಿಮಾದ ಟ್ರೈಲರ್ ಬಿಡುಗಡೆ!!

masthmagaa.com:

90ರ ದಶಕದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಅವರು “ಮೃತ್ಯುಂಜಯ” ಎನ್ನುವ ಹೆಸರಿನಲ್ಲಿ ಒಂದು ಸಿನಿಮಾ ಮಾಡಿದ್ದರು. ಈಗ 2021 ರಲ್ಲಿ ಅದೇ ಶೀರ್ಷಿಕೆಯಲ್ಲಿ ಹೊಸ ತಂಡವೊಂದು ಸಿನಿಮಾ ಮಾಡಿ ಮುಗಿಸಿದೆ. ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಮೃತ್ಯುಂಜಯ ಸಿನಿಮಾದಲ್ಲಿ ಆತ್ಮಹತ್ಯೆ ಎಂಬುದು ಯಾವುದೇ ರೀತಿಯಿಂದಲೂ ಸರಿಯಾದ ನಿರ್ಧಾರವಲ್ಲ ಎಂದು ಪ್ರತಿಪಾದಿಸುವ ಕಥೆಯನ್ನು ಹೊಂದಿದೆಯಂತೆ.
ಚಿತ್ರದಲ್ಲಿ ಹಿರಿಯ ನಟಿ ಸುಮನ್ ನಗರ್ಕರ್ ಸೈಕಿಯಾಟ್ರಿಸ್ಟ್ ಪಾತ್ರ ಮಾಡುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಹೊರಡುವ ನಾಯಕನನ್ನ ಹೇಗೆ ಆ ಚಿಂತನೆಯಿಂದ ಹೊರತರುತ್ತಾರೆ ಎಂಬುದು ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದು.
192 ಗಂಟೆಗಳಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ದೇಶದಾದ್ಯಂತ ಅನ್ಲಾಕ್ ಪ್ರಕ್ರಿಯೆ ಆರಂಭವಾದ ಹೊತ್ತಲ್ಲಿ ಶೂಟಿಂಗ್ ಮುಗಿಸಿದೆ.
ಚಿತ್ರಕ್ಕೆ ಸಾಹಿತ್ಯ, ಸಂಭಾಷಣೆ, ಚಿತ್ರಕಥೆ ಮತ್ತು ನಿರ್ದೇಶನದ ಹೊಣೆಯನ್ನ ಎಸ್ ಎಸ್ ಸಜ್ಜನ್ ಅವರು ಹೊತ್ತುಕೊಂಡಿದ್ದಾರೆ. ಎಸ್. ಪಿ. ಪಿಕ್ಚರ್ಸ್ ವತಿಯಿಂದ ಶೈಲಜ ಪ್ರಕಾಶ್ ಅವರು ನಿರ್ಮಾಣ ಮಾಡಿದ್ದಾರೆ.
ಚಿತ್ರದ ಟ್ರೈಲರ್ ಅನ್ನು ನಟ ಯಶಸ್ ಸೂರ್ಯ ಬಿಡುಗಡೆ ಮಾಡಿದರು.
-masthmagaa.com
Contact Us for Advertisement

Leave a Reply