ಮಗಳ ಜೊತೆ ಸೇರಿ ಕಾರು ತೊಳೆದ ಮಾಹಿ… ವಿಡಿಯೋ ವೈರಲ್

ರಾಂಚಿ: ವಿಶ್ವಕಪ್ ಬಳಿಕ ರೆಸ್ಟ್​​ನಲ್ಲಿರೋ ಮಹೇಂದ್ರ ಸಿಂಗ್ ಧೋನಿ ಫುಲ್ ಆರಾಮಾಗಿ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ರಾಂಚಿಯ ಮೈದಾನದಲ್ಲಿ ಟೆಸ್ಟ್​ ಪಂದ್ಯ ನಡೆಯುತ್ತಿದ್ರೆ, ಧೋನಿ ತಮ್ಮ ಮಿಲಿಟರಿ ಜೀಪ್ ಜೊತೆ ರೋಡ್​ಗೆ ಇಳಿದಿದ್ರು. ಈ ವೇಳೆ ಅವರ ರೈಡ್ ತುಂಬಾ ವೈರಲ್ ಆಗಿತ್ತು. ಈಗ ಅದೇ ಜೀಪನ್ನು ತಮ್ಮ ಮಗಳು ಜೀವಾ ಜೊತೆ ತೊಳೆದಿರುವ ವಿಡಿಯೋ ವೈರಲ್ ಆಗಿದೆ. ಜೀವಾ ಪುಟ್ಟ ಪುಟ್ಟ ಕೈಗಳಿಂದ ಜೀಪ್ ತೊಳೆಯುತ್ತಿರುವ ಈ ದೃಶ್ಯವನ್ನು ಧೋನಿ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​​ನಲ್ಲಿ ಹಾಕಿದ್ದಾರೆ. ಅಲ್ಲದೆ ಸಣ್ಣ ಸಹಾಯ ಕೂಡ ತುಂಬಾ ಮುಖ್ಯ. ಅದರಲ್ಲೂ ದೊಡ್ಡ ಕಾರು ಸ್ವಚ್ಛಗೊಳಿಸುವಾಗಂತೂ ಸಹಾಯ ಇನ್ನೂ ಮುಖ್ಯವಾಗುತ್ತದೆ ಎಂದು ಇನ್​ಸ್ಟಾಗ್ರಾಂ ಪೋಸ್ಟ್​ ಹಾಕಿದ್ದಾರೆ.

https://www.instagram.com/p/B3_xwpuF9A9/?utm_source=ig_web_copy_link

Contact Us for Advertisement

Leave a Reply