ಪ್ರಧಾನಿ ಮೋದಿ, ಧೋನಿ ವಿರೋಧಿಗಳಿಗೆ ಶಾಕ್..!

ದೇಶದಲ್ಲಿ ಅತ್ಯಂತ ಮೆಚ್ಚುಗೆಗೆ ಪಾತ್ರರಾದ ವ್ಯಕ್ತಿಗಳ ಪಟ್ಟಿ ಬಿಡುಗಡೆಯಾಗಿದೆ. ಯುಗೋವ್ ಎಂಬ ಸಂಸ್ಥೆ ಈ ಬಗ್ಗೆ ಸಮೀಕ್ಷೆ ನಡೆಸಿ, ಪಟ್ಟಿ ಬಿಡುಗಡೆ ಮಾಡಿದೆ. ಇದರ ಪ್ರಕಾರ ಮೋದಿ ಬಿಟ್ಟರೆ ಧೋನಿಯೇ ಹೆಚ್ಚು ಮೆಚ್ಚುಗೆಗೆ ಪಾತ್ರರಾದ ವ್ಯಕ್ತಿಯಾಗಿದ್ದಾರೆ. ಮೋದಿ 15.66 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಧೋನಿ 8.58 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ರತನ್ ಟಾಟಾ, 4ನೇ ಸ್ಥಾನದಲ್ಲಿ ಬರಾಕ್ ಒಬಾಮಾ ಮತ್ತು ಐದನೇ ಸ್ಥಾನದಲ್ಲಿ ಬಿಲ್ ಗೇಟ್ಸ್ ಇದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 4.46 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದಾರೆ. ಇನ್ನು ಮಹಿಳೆಯರ ಪೈಕಿ ಮೇರಿಕೋಮ್ 10.36 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಕಿರಣ್ ಬೇಡಿ 2ನೇ ಮತ್ತು ಲತಾ ಮಂಗೇಶ್ಕರ್ 3ನೇ ಸ್ಥಾನದಲ್ಲಿದ್ದಾರೆ. ದೀಪಿಕಾ ಪಡುಕೋಣೆ 5ನೇ ಸ್ಥಾನ ಪಡೆದುಕೊಂಡಿದ್ರೆ, ಪ್ರಿಯಾಂಕಾ ಚೋಪ್ರಾ 8ನೇ ಸ್ಥಾನಕ್ಕೆ ತೃಪ್ತಪಟ್ಟುಕೊಂಡಿದ್ದಾರೆ.

Contact Us for Advertisement

Leave a Reply