ಧೋನಿ ಮುಖ್ಯನಾ..? ದೇಶ ಮುಖ್ಯನಾ..? ಅಷ್ಟು ಗೊತ್ತಾಗಲ್ವಾ..? ಗೌತಮ್ ಕೆಂಡ

ವಿಶ್ವಕಪ್ ಬಳಿಕ ತಂಡದಿಂದ ದೂರ ಉಳಿದಿರೋ ಎಂ.ಎಸ್.ಧೋನಿ ಮತ್ತೆ ತಂಡಕ್ಕೆ ಬರ್ತಾರಾ..? ಅಥವಾ ನಿವೃತ್ತಿ ಘೋಷಿಸಿಬಿಡ್ತಾರಾ ಅನ್ನೋದು ಪ್ರಶ್ನೆಯಾಗೇ ಉಳಿದಿದೆ. ಈ ಬಗ್ಗೆ ಮಾತನಾಡಿರುವ ಮಾಜಿ ಆಟಗಾರ ಗೌತಮ್ ಗಂಭೀರ್, ನಿವೃತ್ತಿ ಅನ್ನೊದು ಆಟಗಾರನ ವೈಯಕ್ತಿಕ ನಿರ್ಧಾರ. ಅದನ್ನು ಬೇರೆ ಯಾರೂ ಹೇಳಲು ಸಾಧ್ಯವಿಲ್ಲ. ಆದ್ರೂ ಅಂತಿಮವಾಗಿ ದೇಶದ ಭವಿಷ್ಯ ಮುಖ್ಯವಾಗಿರೋದ್ರಿಂದ ಬಿಸಿಸಿಐ ಆಯ್ಕೆ ಸಮಿತಿ ಸಾಧ್ಯವಾದಷ್ಟು ಬೇಗ ಧೋನಿ ಅಭಿಪ್ರಾಯವನ್ನು ಪಡೆಯಬೇಕು. ಸಮಿತಿ ಏನು ಮಾಡ್ತಿದೆ..? ಧೋನಿಗಿಂತ ದೇಶವೇ ಮುಖ್ಯ ಅನ್ನೋದು ಆಯ್ಕೆ ಸಮಿತಿಗೆ ಗೊತ್ತಾಗಲ್ವಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಮುಂದಿನ ವಿಶ್ವಕಪ್‍ನಲ್ಲಿ ಧೋನಿ ಆಡುತ್ತಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಹೀಗಾಗಿ ಯುವ ಆಟಗಾರರಿಗೆ ಅವಕಾಶ ಕೊಟ್ಟು ಇಂದಿನಿಂದಲೇ ಸಿದ್ಧತೆ ಆರಂಭಿಸಬೇಕು ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಸುನೀಲ್ ಗವಾಸ್ಕರ್ ಕೂಡ ಧೋನಿಯ ಆಟದ ಸಮಯ ಮುಗಿದಿದೆ. ಇದು ನಿವೃತ್ತಿ ತೆಗೆದುಕೊಳ್ಳುವ ಸಮಯ. ಅವರನ್ನು ಹೊರದಬ್ಬುವ ಮುನ್ನ ಅವರು ನಿವೃತ್ತಿ ಘೋಷಿಸಬೇಕು ಎಂದಿದ್ದರು. ಆದ್ರೆ ಯುವರಾಜ್ ಸಿಂಗ್ ಮಾತ್ರ, ಧೋನಿ ಕೊಡುಗೆ ಅಪಾರ. ನಿವೃತ್ತಿ ಘೋಷಿಸೋದು ಅವರ ವೈಯಕ್ತಿಕ ಎಂದು ಹೇಳಿದ್ದರು.

Contact Us for Advertisement

Leave a Reply