ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿ..!

masthmagaa.com:

ಮಾರ್ಕ್ ಝೂಕರ್​ಬರ್ಗ್​ ಅವರ ಫೇಸ್​ಬುಕ್ ಕಂಪನಿ ರಿಲಾಯನ್ಸ್ ಜಿಯೋ ಜೊತೆ ಕೈಜೋಡಿಸಿದ ಬೆನ್ನಲ್ಲೇ ಮುಕೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ನಂಬರ್ 1 ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನ ಅಲಂಕರಿಸಿದ್ದಾರೆ.

ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಷೇರುಗಳು ಬುಧವಾರ 10 ಪರ್ಸೆಂಟ್ ಏರಿಕೆ ಕಂಡ ಹಿನ್ನೆಲೆ 4.7 ಬಿಲಿಯನ್ ಡಾಲರ್​​ ಇದ್ದ ಅಂಬಾನಿಯ ಸಂಪತ್ತು 49.2 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ. ಇದರ ಪರಿಣಾಮ ಬ್ಲೂಮ್​ಬರ್ಗ್​ ಬಿಲೇನೇರ್ ಇಂಡೆಕ್ಸ್​ನಲ್ಲಿ ಅಲಿಬಾಬಾ ಸಹ ಸಂಸ್ಥಾಪಕ ಜಾಕ್​ ಮಾ ಅವರನ್ನು ಹಿಂದಿಕ್ಕಿರೋ ಮುಕೇಶ್ ಅಂಬಾನಿ ಮೊದಲ ಸ್ಥಾನಕ್ಕೇರಿದ್ದಾರೆ.

ಸದ್ಯ ಮುಕೇಶ್ ಅಂಬಾನಿಯ ಸಂಪತ್ತು 49.2 ಬಿಲಿಯನ್ ಡಾಲರ್ (3 ಲಕ್ಷದ 70 ಸಾವಿರ ಕೋಟಿಗೂ ಹೆಚ್ಚು) ಇದೆ. ಜಾಕ್ ಮಾ ಅವರ ಸಂಪತ್ತು 46 ಬಿಲಿಯನ್ ಡಾಲರ್ ಇದೆ.

ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಜಿಯೋದಲ್ಲಿ 43,574 ಕೋಟಿ ರೂಪಾಯಿ ಹೂಡಿಕೆ ಮಾಡಿರುವ ಫೇಸ್​ಬುಕ್ ಶೇ. 9.99ರಷ್ಟು ಷೇರುಗಳನ್ನ ಖರೀದಿಸಿದೆ. ಇದರ ಬೆನ್ನಲ್ಲೇ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಷೇರುಗಳು ಏರಿಕೆ ಕಂಡು, ಮುಕೇಶ್ ಅಂಬಾನಿಯನ್ನು ಮತ್ತೊಮ್ಮೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗುವಂತೆ ಮಾಡಿದೆ.

-masthmagaa.com

Contact Us for Advertisement

Leave a Reply