ಚಾಟ್‌ GPTಗೆ ಪ್ರತಿಯಾಗಿ ಅಂಬಾನಿಯಿಂದ ಹನೂಮಾನ್‌ AI!

masthmagaa.com:

ದೇಶಿ AI ಅಭಿವೃದ್ಧಿಗೆ ಕೈಹಾಕಿರೋ ರಿಲಾಯನ್ಸ್‌ ಈಗ ಚಾಟ್‌ GPTಗೆ ಪ್ರತಿಯಾಗಿ ʻಹನೂಮಾನ್‌ʼ AIನ್ನ ರಿಲೀಸ್‌ ಮಾಡ್ತಿದೆ. ರಿಲಾಯನ್ಸ್‌ ಬೆಂಬಲಿತ ಭಾರತ್‌ GPT ಮುಂದಿನ ತಿಂಗಳು ಈ AI ಸರ್ವೀಸ್‌ನ್ನ ಲಾಂಚ್‌ ಮಾಡಲಿದೆ. ರಿಲಾಯನ್ಸ್‌ ಜಿಯೋ ಇಂಫೋಕಾಂ ಜೊತೆಗೆ 8 IITಗಳು ಸೇರಿ ಈ AI ಮಾಡೆಲ್‌ನ್ನ ಅಭಿವೃದ್ಧಿ ಪಡಿಸ್ತಿವೆ. ಮುಂಬೈನ ಟೆಕ್‌ ಕಾನ್‌ಫರೆನ್ಸ್‌ ಒಂದ್ರಲ್ಲಿ ಡೆಮೋನೂ ತೋರಿಸಿವೆ. ಈ ವೇಳೆ ಬೈಕ್‌ ಮೆಕಾನಿಕ್‌ ಒಬ್ರು ತಮಿಳಲ್ಲಿ ಈ AI ಬಾಟ್‌ ಜೊತೆ ಮಾತಾಡಿದ್ದಾರೆ. ಹೈದರಾಬಾದ್‌ ಮೂಲದ ಸಾಫ್ಟ್‌ವೇರ್‌ ಡೆವಲಪರ್‌ ಒಬ್ರು ಇದ್ರ ಮೂಲಕ ಕಂಪ್ಯೂಟರ್‌ ಕೋಡ್‌ ಬರೆದಿದ್ದಾರೆ. ಈ ಮಾಡೆಲ್‌ 11 ಸ್ಥಳೀಯ ಭಾಷೆಗಳಲ್ಲಿ ಹೆಲ್ತ್‌ಕೇರ್‌, ಆಡಳಿತ, ಫಿನಾನ್ಷಿಯಲ್‌ ಸರ್ವೀಸ್‌ ಎಜುಕೇಷನ್‌ ಹೀಗೆ 4 ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply