ಕೆನಡಾ: ಮೃತ ಉಗ್ರ ನಿಜ್ಜರ್‌ ಸ್ನೇಹಿತನ ಮನೆಯಲ್ಲಿ ಗುಂಡಿನ ದಾಳಿ!

masthmagaa.com:

ಕೆನಡಾದ ಮೃತ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಸ್ನೇಹಿತನ ಮನೆಯಲ್ಲಿ ಗುಂಡಿನ ದಾಳಿ ನಡೆದಿರೋದು ವರದಿಯಾಗಿದೆ. ಈ ಘಟನೆ ಕೆನಡಾದ ದಕ್ಷಿಣ ಸರ್ರೆನಲ್ಲಿರೋ ಹರ್ದೀಪ್‌ ಸ್ನೇಹಿತ ಸಿಮ್ರಂಜೀತ್‌ ಸಿಂಗ್‌ ಅನ್ನೋರ ಮನೆಯಲ್ಲಿ ನಡೆದಿದೆ. ಹೀಗಂತ ಅಲ್ಲಿನ ಸ್ಥಳೀಯರು ಫೆಬ್ರುವರಿ 02 ರಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ದಾಳಿ ವೇಳೆ ಮನೆ ಆಚೆ ನಿಂತಿದ್ದ ಕಾರ್‌ಗಳಿಗೆ ತೀವ್ರ ಡ್ಯಾಮೇಜ್‌ ಆಗಿದ್ದು, ಮನೆಯ ಕಿಟಕಿ, ಗೋಡೆಗಳಲ್ಲಿ ಬುಲೆಟ್‌ ಗುರುತುಗಳಾಗಿವೆ. ಸದ್ಯ ತನಿಖೆ ಆರಂಭದ ಹಂತದಲ್ಲಿದ್ದು, ಗುಂಡಿನ ದಾಳಿಗೆ ಕಾರಣ ಪತ್ತೆ ಹಚ್ಚಲಾಗ್ತಿದೆ.

-masthmagaa.com

Contact Us for Advertisement

Leave a Reply