ಮುಂಬೈ ರೋಡ್‌ ಶೋ ವಿತ್‌ “ಕಬ್ಜ”

masthmagaa.com:

ಉಪೇಂದ್ರ, ಸುದೀಪ್‌ ಅಭಿನಯದ ಕಬ್ಜ ಸಿನಿಮಾ ಸದ್ಯ ಎಲ್ಲೆಡೆ ಸುದ್ದಿಯಲ್ಲಿದೆ. ಸಿನಿಮಾ ತಂಡ ಇವಾಗ ಪ್ರಮೋಷನ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಚಂದ್ರು ನಿರ್ಮಾಣದ, ನಿರ್ದೇಶನದ ‘ಕಬ್ಜ’ ಚಿತ್ರದ ಬಿಡುಗಡೆಗೆ ಇನ್ನೊಂದು ವಾರವಷ್ಟೇ ಉಳಿದಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಉಪೇಂದ್ರ, ನಿರ್ದೇಶಕ ಆರ್‌ ಚಂದ್ರು, ಸುದೀಪ್, ಶ್ರೇಯಾ ಶರಣ್ , ಗುರುವಾರ ಮುಂಬೈನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿ ಬಂದಿದ್ದಾರೆ. ಮುಂಬೈನಲ್ಲಿ ‘ಕಬ್ಜ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ನಡೆದಿದೆ. ಮೊದಲಿಗೆ ಬುಲೆಟ್ ಮೂಲಕ ಸುಮಾರು 60 ಬೈಕ್​ಗಳಲ್ಲಿ ಎರಡೂ ವರೆ ಕಿ.ಮೀ ರ‍್ಯಾಲಿ ಮಾಡಿದ್ರು. ಉಪೇಂದ್ರ, ಆನಂದ್ ಪಂಡಿತ್ ಸುದೀಪ್, ಶ್ರೇಯಾ ಶರಣ್ ಬುಲೆಟ್‌ ಏರಿ ರೋಡ್‌ ಶೋ ಮಾಡಿದ್ರು. ‘ಜನ ನಮ್ಮ ಚಿತ್ರದ ಟ್ರೇಲರ್​ಗೆ ಸಾಕಷ್ಟು ಪ್ರೀತಿ ತೋರುತ್ತಿದ್ದಾರೆ. ಈ ಪ್ರೀತಿ ಚಿತ್ರ ಬಿಡುಗಡೆಯಾದ ಮೇಲೂ ಮುಂದುವರೆಯಲಿ’ ಎಂದು ಸುದೀಪ್‌ ಹೇಳಿದರು. ಉಪೇಂದ್ರ ಅವರು”ಅಭಿಮಾನಿಗಳ ಈ ಪ್ರೀತಿ ನೋಡಿ ತಮ್ಮ ಕಣ್ತುಂಬಿ ಬಂದಿದೆ” ಎಂದರು “ಚಿತ್ರವನ್ನು ನೋಡಿ ಹರಸಿ, ಹಾರೈಸಿ” ಎಂದರು. ‘ಕಬ್ಜ’ ಚಿತ್ರವು ಮಾರ್ಚ್17 ರಂದು ಜಗತ್ತಿನಾದ್ಯಂತ 50 ದೇಶಗಳ 4 ಸಾವಿರ ಪರದೆಗಳಲ್ಲಿ, ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

-masthmagaa.com

Contact Us for Advertisement

Leave a Reply