ಭಾರತದ ಸಂಸತ್ತಿನಲ್ಲಿರೊ ಅಖಂಡ ಭಾರತದ ಮ್ಯಾಪ್‌ ತೆಗೆಯಿರಿ: ನೇಪಾಳ

masthmagaa.com:

ಭಾರತದಲ್ಲಿ ನೂತನವಾಗಿ ಉದ್ಘಾಟನೆಯಾಗಿರೋ ಸಂಸತ್‌ನಲ್ಲಿ ಅಖಂಡ ಭಾರತವನ್ನ ತೋರಿಸುವ ಮುರಾಲ್‌ ಚಿತ್ರಕಲೆಯನ್ನ ಪ್ರದರ್ಶಿಸಲಾಗಿದೆ. ಅದು ನೆರೆಯ ನೇಪಾಳ, ಪಾಕ್‌, ಅಫ್ಘಾನಿಸ್ತಾನ್‌, ಬಾಂಗ್ಲಾದೇಶ ಹಾಗೂ ಶ್ರೀಲಂಕಾದ ಹಲವು ಭಾಗಗಳನ್ನ ಒಳಗೊಂಡಿದೆ. ಇದೀಗ ಈ ಮುರಾಲ್‌ನ್ನ ತೆಗೆಯುವಂತೆ ನೇಪಾಳದಲ್ಲಿ ಕೂಗು ಕೇಳಿಬಂದಿದೆ. ಭಾರತದ ಪ್ರವಾಸದಲ್ಲಿರೊ ನೇಪಾಳ ಪ್ರಧಾನಿ ಪುಷ್ಪ ಕಮಲ್‌ ದಹಲ್‌ ಅವ್ರಿಗೆ ಈ ಕುರಿತು ಭಾರತದ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ನೇಪಾಳದ ರಾಜಕೀಯ ಮುಖಂಡರು ಆಗ್ರಹಿಸಿದ್ದಾರೆ. ತನ್ನನ್ನ ತಾನು ಪುರಾತನ ದೇಶ ಹಾಗೂ ಪ್ರಜಾಪ್ರಭುತ್ವದ ಮಾಡಲ್‌ ಅಂತ ಕರೆದುಕೊಳ್ಳುವ ಭಾರತದಂತ ದೇಶ, ನೇಪಾಳದ ಭೂಭಾಗಗಳನ್ನ ತನ್ನ ಮ್ಯಾಪ್‌ನಲ್ಲಿ ಸೇರಿಸಿ, ಸಂಸತ್ತಿನಲ್ಲಿ ತೂಗಿಹಾಕೋದು ಸರಿಯಲ್ಲ ಅಂತ ನೇಪಾಳದ ಮಾಜಿ ಪಿಎಂ ಕೆಪಿ ಓಲಿ ಕಿಡಿಕಾರಿದ್ದಾರೆ. ಅಲ್ದೇ ಈ ಬಗ್ಗೆ ಭಾರತದೊಂದಿಗೆ ಚರ್ಚಿಸಿ ಅಂತ ಪ್ರಧಾನಿ ದಹಲ್‌ ಅವ್ರಿಗೆ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply