ಮತದಾನ ತಡೆದ್ರಾ ಅಧಿಕಾರಿಗಳು? ಆಯೋಗ ಹೇಳಿದ್ದೇನು?

masthmagaa.com:

ಮತ್ತೊಂದೆಡೆ ಯುಪಿನಲ್ಲಿ ವೋಟ್‌ ಮಾಡೋಕೆ ಬಂದ ಮುಸ್ಲಿಂ ಸಮುದಾಯದವ್ರ ಮೇಲೆ ಪೋಲಿಸರು ಲಾಠಿ ಚಾರ್ಜ್‌ ನಡೆಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಸಂಭಾಲ್‌ ಕ್ಷೇತ್ರದಲ್ಲಿ ಬರೋ ಅಸ್ಮೌಲಿ ಅನ್ನೋ ಗ್ರಾಮದ 4 ಮತಗಟ್ಟೆಗಳಲ್ಲಿ ಈ ರೀತಿಯಾಗಿದೆ ಅಂತ ಮಾಧ್ಯಮಗಳು ವರದಿ ಮಾಡಿವೆ.

ಆದ್ರೆ ಚುನಾವಣಾ ಆಯೋಗ ಈ ಸುದ್ಧಿ ಸುಳ್ಳು ಅಂತೇಳಿದೆ. ಈ ಬಗ್ಗೆ ಕ್ಲಾರಿಟಿ ಕೊಟ್ಟಿರೋ ಆಯೋಗ, ಲಾಠಿ ಚಾರ್ಜ್‌ ವೀಡಿಯೋ ಬಗ್ಗೆ ತನಿಖೆ ನಡೆಸಲಾಗ್ತಿದೆ. ಸಂಭಾಲ್ ಚುನಾವಣಾ ಕೇಂದ್ರದ ಒಳಗೆ ಹಲವರು‌ ಅನಾವಶ್ಯವಕವಾಗಿ ನಿಂತಿದ್ರು. ಹಾಗಾಗಿ ಪೊಲೀಸರು ಅವರನ್ನ ಹೊರಗೆ ಕಳಿಸಿ, ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಅಂತೇಳಿದೆ.

-masthmagaa.com

Contact Us for Advertisement

Leave a Reply