ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್‌ ರೆಡಿ !

masthmagaa.com:

ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್‌ ರೆಡಿಯಾಗಿದೆ. 800 ಅನ್ನೋ ಟೈಟಲ್‌ ಇಟ್ಟಿರುವ ಚಿತ್ರತಂಡ ಟ್ರೈಲರ್‌ ಅನ್ನ ಸೊನಿ ಮ್ಯೂಸಿಕ್‌ ಸೌತ್‌ ಅನ್ನೋ ಯ್ಯೂಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಮಾಡಿದ್ದಾರೆ. ಟ್ರೈಲರ್‌ ನೋಡ್ತಾ ಇದ್ರೆ ಮುತ್ತಯ್ಯ ಅವರ ಜೀವನ ಅಷ್ಟು ಸುಲಭವಾಗಿರಲಿಲ್ಲ ಅನ್ನೋದು ಅರ್ಥ ಆಗತ್ತೆ. ಮುತ್ತಯ್ಯ ಅವರ ಚಿಕ್ಕ ವಯಸ್ಸಿನ ಜೀವನದಿಂದ ಶುರುವಾದ ಈ ಮೂವಿ ಕೊನೆಗೆ ಅವರು ಸಕ್ಸಸ್‌ಫುಲ್‌ ಬೌಲರ್‌ ಹೇಗೆ ಆದ್ರು ಅನ್ನೋ ತನಕ ಇದೆ.

ಬೌಲಿಂಗ್‌ ಮಾಡೋವಾಗ ಅವರಿಗೆ ಎದುರಾದಂತ ಕಷ್ಟ ಯಾವ ರೀತಿ ಇತ್ತು ? ಅದನ್ನ ಮುತ್ತಯ್ಯ ಅವರು ಯಾವ ರೀತಿ ಫೇಸ್‌ ಮಾಡಿದ್ರು ಎಲ್ಲವನ್ನೂ ಕೂಡ ಈ ಮೂವಿಯಲ್ಲಿ ತೋರಿಸಿದ್ದಾರೆ. ಇನ್ನೂ ಮುತ್ತಯ್ಯ ಅವರ ಗೆಟಪ್‌ನಲ್ಲಿ ಸ್ಲಮ್‌ಡಾಗ್ ಮಿಲಿಯನೇರ್ ಖ್ಯಾತಿಯ ಮಧುರ್‌ ಮಿತ್ತಲ್‌ ಅವರು ಕಾಣಿಸಿಕೊಂಡಿದ್ದಾರೆ. ಎಮ್‌.ಎಸ್‌ ಶ್ರೀಪತಿ ಅವರ ಡೈರೆಕ್ಷನ್‌ನಲ್ಲಿ ಈ ಮೂವಿ ಮೂಡಿಬಂದಿದೆ. ಚಿತ್ರವು ತಮಿಳು, ಹಿಂದಿ, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

-masthmagaa.com

Contact Us for Advertisement

Leave a Reply