ಆಂಗ್‌ ಸಾನ್‌ ಸೂಕಿಯ ಆಪ್ತರನ್ನ ಬಂಧಿಸಿದ ಮಯನ್ಮಾರ್‌ ಸೇನೆ

masthmagaa.com:

ಮಯನ್ಮಾರ್‌ಅನ್ನ ಸೇನೆ ತನ್ನ ವಶಕ್ಕೆ ತೆಗೆದುಕೊಂಡ ಮೇಲೆ ಆಂಗ್‌ ಸಾನ್‌ ಸೂಕಿ ಮತ್ತು ಅವರ ಜೊತೆಗಿದ್ದ ಒಬ್ಬೊಬ್ಬರನ್ನೆ ಸೇನೆ ಜೈಲಿಗೆ ಹಾಕ್ತ ಇದೆ. ಇದೀಗ ಆಂಗ್‌ ಸಾನ್‌ ಸೂಕಿಯ ಆಪ್ತರಾದ ಯುಟ್‌ ನು ಆಂಗ್ ಅವರನ್ನ ಆರೆಸ್ಟ್‌ ಮಾಡಲಾಗಿದೆ. ಮಯನ್ಮಾರ್‌ನ ಅತ್ಯಂತ ಧಕ್ಷ, ಪ್ರಮಾಣಿಕ ಲಾಯರ್ ಅಂತ ಕರೆಸಿಕೊಳ್ಳುವ ಯುಟ್‌ ನು ಆಂಗ್‌ ವಿರುದ್ದ ಭಯೋತಾದನೆಗೆ ಹಣಕಾಸು ಒದಗಿಸ್ತಾ ಇದ್ರು ಅನ್ನುವ ಆರೋಪವನ್ನ ಹೊರಿಸಿ ಇದೀಗ ಆರೆಸ್ಟ್‌ ಮಾಡಿದ್ದಾರೆ. ಇವರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ಭಾರಿ ಪ್ರಮಾಣದ ದಂಡ ವಿಧಿಸುವ ಸಾಧ್ಯತೆ ಇದೆ ಅಂತ ಹೇಳಲಾಗ್ತ ಇದೆ.

-masthmagaa.com

Contact Us for Advertisement

Leave a Reply