ಮಯನ್ಮಾರ್​ನಲ್ಲಿ ಹಬ್ಬಕ್ಕೆ ಬಿಡುಗಡೆಯಾಗಿದ್ದವರು ಮತ್ತೆ ಅರೆಸ್ಟ್!

masthmagaa.com:

ಮೊನ್ನೆಯಷ್ಟೇ ಥಡಿಂಗ್ಯು ಹಬ್ಬ ಅಂತ ರಾಜಕೀಯ ಕೈದಿಗಳನ್ನು ಬಿಡುಗೆ ಮಾಡಿದ್ದ ಮಯನ್ಮಾರ್ ಮಿಲಿಟರಿ ಸರ್ಕಾರ, ಈಗ ಹಬ್ಬ ಮುಗುದ್ಮೇಲೆ ಮತ್ತೆ ಅರೆಸ್ಟ್ ಮಾಡೋಕೆ ಶುರು ಮಾಡಿದೆ. ಕ್ಷಮಾದಾನ ಅಂತ ಹೇಳಿ ಬಿಡುಗಡೆಯಾಗಿದ್ದ 110 ಮಂದಿಯನ್ನು ಮತ್ತೆ ಅರೆಸ್ಟ್ ಮಾಡಿ ಜೈಲಿಗೆ ತಳ್ಳಲಾಗಿದೆ ಅಂತ ರಾಜಕೀಯ ಕೈದಿಗಳ ಸಹಾಯ ಸಂಘ ಮಾಹಿತಿ ನೀಡಿದೆ. ಕೆಲವರ ಹೆಸರು ರಿಲೀಸ್​ ಲಿಸ್ಟ್​ನಲ್ಲೇ ಇದ್ರೂ ಕೂಡ ಮತ್ತೆ ಅರೆಸ್ಟ್ ಮಾಡಿ ಜೈಲಿಗೆ ತಳ್ಳಲಾಗಿದೆ. ಹಬ್ಬದ ಅಂಗವಾಗಿ 5636 ರಾಜಕೀಯ ಕೈದಿಗಳನ್ನ ಬಿಡುಗಡೆ ಮಾಡಲಾಗಿದೆ. ಫೆಬ್ರವರಿಯಲ್ಲಿ ಮಿಲಿಟರಿ ಸರ್ಕಾರ ಬಂದ ನಂತರ ಈವರೆಗೆ 1,100 ಮಂದಿ ಬಲಿಯಾಗಿದ್ದು, 8 ಸಾವಿರಕ್ಕೂ ಹೆಚ್ಚು ಜನರನ್ನು ಅರೆಸ್ಟ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply