ಮಯನ್ಮಾರ್​ಗೆ ಆಸಿಯಾನ್ ರಾಯಭಾರಿ ಬರಂಗಿಲ್ಲ: ಸೇನೆ ಸ್ಪಷ್ಟನೆ

masthmagaaa.com:

ಮಯನ್ಮಾರ್​ನಲ್ಲಿ ಪರಿಸ್ಥಿತಿ ಸುಧಾರಿಸೋವರೆಗೆ ಆಸಿಯಾನ್ ಸಂಘಟನೆಯ ಯಾವುದೇ ರಾಯಭಾರಿಯನ್ನ ದೇಶಕ್ಕೆ ಬರಲು ಬಿಡಲ್ಲ ಅಂತ ಮಯನ್ಮಾರ್ ಸೇನೆ ಹೇಳಿದೆ. ಈ ಮೂಲಕ ದೇಶದಲ್ಲಿ ಸೇನಾ ಕ್ಷಿಪ್ರಕ್ರಾಂತಿ ವಿರುದ್ಧ ನಡೆಸುತ್ತಿರೋ ಪ್ರತಿಭಟನೆಗಳನ್ನ ಮತ್ತಷ್ಟು ಹತ್ತಿಕ್ಕೋದಾಗಿ ಮಯನ್ಮಾರ್ ಸೇನೆ ಮುನ್ಸೂಚನೆ ಕೊಟ್ಟಿದೆ. ಕಳೆದ ತಿಂಗಳು ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಮಯನ್ಮಾರ್ ಮತ್ತು ಉಳಿದ ಸದಸ್ಯ ರಾಷ್ಟ್ರಗಳು 5 ಅಂಶಗಳ ಒಪ್ಪಂದಕ್ಕೆ ಬಂದಿದ್ದವು. ಇದರಲ್ಲಿ ಆಸಿಯಾನ್​ನ ರಾಯಭಾರಿ ಮಯನ್ಮಾರ್​ಗೆ ಭೇಟಿ ನೀಡೋದು ಕೂಡ ಒಂದಾಗಿತ್ತು. ಆದ್ರೀಗ ಪರಿಸ್ಥಿತಿ ಸುಧಾರಿಸೋವರೆಗೆ ರಾಯಭಾರಿ ಬರೋಕೆ ಒಪ್ಪಿಗೆ ಕೊಡಲ್ಲ ಅಂತ ಸೇನೆ ಹೇಳಿದೆ.

-masthmagaa.com

Contact Us for Advertisement

Leave a Reply