ಮಯನ್ಮಾರ್​​​​​ ಹಿಂಸೆ: ಥೈಲ್ಯಾಂಡ್​​ಗೆ ಹೋಗ್ತಿದ್ದಾರೆ ಜನ!

masthmagaa.com:

ಮಯನ್ಮಾರ್​ನಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆ ಜೋರಾದಂತೆ, ಸೇನೆ ನಿರ್ದಯವಾಗುತ್ತಾ ಸಾಗುತ್ತಿದೆ. ಮಿಲಿಟರಿ ದಿನಾಚರಣೆಯಾದ ಶನಿವಾರ ಸೇನಾ ದಾಳಿಗೆ ಸಾವನ್ನಪ್ಪಿದ ಪ್ರತಿಭಟನಾಕಾರರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಅದೂ ಅಲ್ಲದೆ ನಿನ್ನೆ ಮತ್ತೆ  ಥೈಲ್ಯಾಂಡ್​​ಗಡಿ ಭಾಗದಲ್ಲಿರೋ ತನ್ನದೇ ಜಿಲ್ಲೆ ಪಾಪುನ್​ ಮೇಲೆ ಮಯನ್ಮಾರ್ ಸೇನೆ ಸ್ಟ್ರೈಕ್ ಮಾಡಿದೆ. ಇದ್ರಲ್ಲಿ ಮತ್ತಿಬ್ಬರು ಸಾವನ್ನಪ್ಪಿದ್ಧಾರೆ. ಇದ್ರಿಂದ ಫೆಬ್ರವರಿ 1ರ ಬಳಿಕ ಮೃತಪಟ್ಟವರ ಸಂಖ್ಯೆ 450ರ ಗಡಿ ಸಮೀಪಿಸಿದೆ. ಈ ನಡುವೆ ಮಯನ್ಮಾರ್​ನಲ್ಲಿ ನಾಗರಿಕ ಯುದ್ಧ ಶುರುವಾಗುವ ಭೀತಿ ಎದುರಾಗಿದೆ. ಹೀಗಾಗಿ 3 ಸಾವಿರಕ್ಕೂ ಅಧಿಕ ಜನ ಓಡಿ ಥಾಯ್ಲೆಂಡ್​​ಗೆ ವಲಸೆ ಬಂದಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್​​, ಮಯನ್ಮಾರ್​ನಲ್ಲಾದ ಹಿಂಸಾಚಾರವನ್ನು ಖಂಡಿಸಿದ್ದಾರೆ.

ಇದು ಮಯನ್ಮಾರ್ ಸೇನೆಯ ಅತಿರೇಖದ ವರ್ತನೆಯಾಗಿದ್ದು, ಭಯಾನಕ ಕೃತ್ಯವಾಗಿದೆ. ಕಾರಣವೇ ಇಲ್ಲದೇ ಸುಖಾಸುಮ್ಮನೆ ಜನರನ್ನು ಹತ್ಯೆ ಮಾಡಲಾಗುತ್ತಿದೆ ಅಂತ ನನಗೆ ಮಾಹಿತಿ ಲಭ್ಯವಾಗಿದೆ ಅಂತ ಕಿಡಿಕಾರಿದ್ದಾರೆ. ಯೂರೋಪಿಯನ್ ಒಕ್ಕೂಟ ಕೂಡ ಈ ಘಟನೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅಂತ ತಿಳಿಸಿದೆ. ಇಷ್ಟೆಲ್ಲಾ ಆಗ್ತಿದ್ರೂ ಅಲ್ಲಿನ ಮಿಲಿಟರಿ ಸ್ವಾಮ್ಯದ ಮ್ಯಾವಡೇ ಎಂಬ ಪತ್ರಿಕೆ ಮಾತ್ರ ಶನಿವಾರ ಪ್ರತಿಭಟನೆಯಲ್ಲಿ 45 ಮಂದಿ ಸಾವನ್ನಪ್ಪಿದ್ದು, 552 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ ಸುದ್ದಿ ಪ್ರಸಾರ ಮಾಡಿದೆ. ಅಲ್ಲದೆ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿ ಮೇಲೆ ಬಾಂಬ್ ಮತ್ತು ಬಂದೂಕು ಬಳಸಿದ್ದಾರೆ. ಹೀಗಾಗಿ ಭದ್ರತಾ ಸಿಬ್ಬಂದಿ ಕೂಡ ಕ್ರಮ ಕೈಗೊಳ್ಳಬೇಕಾಯ್ತು ಅಂತ ಸಮರ್ಥನೆ ಮಾಡಿಕೊಂಡಿದೆ.

-masthmagaa.com

Contact Us for Advertisement

Leave a Reply