ದಸರಾ ಗಜಪಡೆ, ಮಾವುತರಿಗೆ ಇನ್ಷುರೆನ್ಸ್ ಮಾಡಿಸಿದ ಸರ್ಕಾರ!

masthmagaa.com:

ದಸರಾದ ಗಜಪಡೆ ಹಾಗೂ ಮಾವುತರಿಗೆ ರಾಜ್ಯ ಸರ್ಕಾರ ಇನ್ಷುರೆನ್ಸ್ ಮಾಡಿಸಿದೆ. ಜಂಬೂಸವಾರಿಯ ಮುಖ್ಯ ರುವಾರಿ ಅಭಿಮನ್ಯು ಸೇರಿ ಗಂಡು ಆನೆಗಳಿಗೆ ತಲಾ ಮೂರೂವರೆ ಲಕ್ಷ ರುಪಾಯಿ ವಿಮೆ. ಹೆಣ್ಣಾನೆಗೆ ಎರಡೂವರೆ ಲಕ್ಷ ರೂಪಾಯಿಯ ವಿಮೆ ಮಾಡಿಸಲಾಗಿದೆ. ಈ ವಿಮೆ ಮಾಡೋದ್ರಲ್ಲು ಲಿಂಗ ತಾರತಮ್ಯ ಯಾಕೆ ಅನ್ನೋದು ಗೊತ್ತಿಲ್ಲ. ಹಾಗೆ ಮಾವುತರಿಗೆ ತಲಾ 1 ಲಕ್ಷ ರೂಪಾಯಿ ವಿಮೆ, ಸಾರ್ವಜನಿಕ ಆಸ್ತಿಗೆ ನಷ್ಟವಾದರೆ 30 ಲಕ್ಷ ರೂ ವಿಮೆಯನ್ನ ಮಾಡಿಸಲಾಗಿದ್ದು ಎಲ್ಲಾ ವಿಮೆ ಅಕ್ಟೋಬರ್‌ 24ರವರೆಗೂ ಚಾಲ್ತಿಯಲ್ಲಿರುತ್ತೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply