ದಸರಾ ಕೊನೆ ದಿನ..ಇವತ್ತು ಏನೇನು ಕಾರ್ಯಕ್ರಮ ಇದೆ..?

ಇವತ್ತು ನಾಡಹಬ್ಬ ದಸರಾದ ಕೊನೆಯ ದಿನವಾದ ವಿಜಯದಶಮಿಯ ಸಂಭ್ರಮ. ಅರಮನೆ ನಗರಿ ಮೈಸೂರಿನಲ್ಲಿ ಅದ್ಧೂರಿಯಾಗಿ ಜಂಬೂ ಸವಾರಿ ನಡೆಯಲಿದೆ. ಅದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ಜಟ್ಟಿಕಾಳಗ ನಡೆಯಲಿದೆ. ಜಟ್ಟಿ ಕಾಳಗದ ವೇಳೆ ಜಟ್ಟಿಯ ತಲೆಯಿಂದ ರಕ್ತ ಚಿಮ್ಮಿದ್ರೆ ಉಳಿದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತೆ. ಇದಾದ ಬಳಿಕ ಬೆಳ್ಳಿರಥದಲ್ಲಿ ಯದುವೀರ್ ಮೆರವಣಿಗೆ ನಡೆಯಲಿದೆ. ಆಮಲೆ 12 ಗಂಟೆಯೊಳಗಿನ ಶುಭ ಮುಹೂರ್ತದಲ್ಲಿ ಬನ್ನಿಮರಕ್ಕೆ ಯದುವೀರ್ ಪೂಜೆ ಸಲ್ಲಿಸಲಿರುವ ಯದುವೀರ್, ಕಂಕಣ ತೆಗೆಯಲಿದ್ದಾರೆ. ಮಧ್ಯಾಹ್ನದ ಬಳಿಕ ವಿಶ್ವವಿಖ್ಯಾತ ಜಂಬೂ ಸವಾರಿ ಶುರುವಾಗಲಿದ್ದು, ವೀಕ್ಷಣೆಗೆ ಅರಮನೆ ಮುಂದೆ 26 ಸಾವಿರ ಜನರಿಗೆ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2.30ರ ಸುಮಾರಿಗೆ ಸಿಎಂ ಯಡಿಯೂರಪ್ಪ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 7 ಗಂಟೆಗೆ ಜಂಬೂ ಸವಾರಿ ಮುಗಿಯಲಿದ್ದು, ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯಲಿದೆ. ಕೊನೆಯಲ್ಲಿ ರಾತ್ರಿ 10 ಗಂಟೆಗೆ ಸಿಡಿಮದ್ದು ಪ್ರದರ್ಶನದ ಮೂಲಕ ನಾಡಹಬ್ಬ ದಸರಾಗೆ ವಿದ್ಯುಕ್ತವಾಗಿ ತೆರೆ ಬೀಳಲಿದೆ.

Contact Us for Advertisement

Leave a Reply