ಪುನೀತ್ ರಾಜ್​ಕುಮಾರ್​​ಗೆ ಮರಣೋತ್ತರ ಗೌರವ ಡಾಕ್ಟರೇಟ್

masthmagaa.com:

ಮೈಸೂರು ವಿಶ್ವವಿದ್ಯಾನಿಲಯ ನಟ ಪುನೀತ್‌ ರಾಜ್‌ಕುಮಾರ್​​ಗೆ ಮರಣೋತ್ತರ ಗೌರವ ಡಾಕ್ಟರೇಟ್‌ ಘೋಷಿಸಿದೆ. ಪುನೀತ್‌ ರಾಜ್‌ಕುಮಾರ್‌ ಸಿನಿಮಾ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ವಲಯದಲ್ಲಿ ಮಾಡಿದ ಕೆಲಸಗಳನ್ನ ಗಮನಿಸಿ ಈ ಗೌರವ ಡಾಕ್ಟರೇಟ್‌ ಕೊಡಲಾಗಿದೆ. ಅಂದಹಾಗೆ ಇನ್ನೊಂದು ವಿಶೇಷತೆ ಅಂದ್ರೆ 46 ವರ್ಷಗಳ ಹಿಂದೆ ಡಾಕ್ಟರ್ ರಾಜ್‌ಕುಮಾರ್‌ ಅವರಿಗೂ ಮೈಸೂರು ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್‌ ನೀಡಿತ್ತು. ಇನ್ನು ಮಾರ್ಚ್ 22ರಂದು ವಿವಿಯ 102ನೇ ಘಟಿಕೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಪುನೀತ್‌ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಿದ್ದಾರೆ.

-masthmagaa.com

Contact Us for Advertisement

Leave a Reply