ಕ್ಷಿಪಣಿ ಪರೀಕ್ಷೆ ಒಪ್ಪಿದ ಉತ್ತರ ಕೊರಿಯಾ: ಭದ್ರತಾ ಮಂಡಳಿ ತುರ್ತು ಸಭೆ

masthmagaa.com:

ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಉಡಾವಣೆಯನ್ನು ಒಪ್ಪಿಕೊಂಡಿದೆ. ನಿನ್ನೆ ದಕ್ಷಿಣ ಕೊರಿಯಾ ಸೇನೆ ಈ ಬಗ್ಗೆ ಮಾಹಿತಿ ನೀಡಿತ್ತು. ಇದೀಗ ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ಕೂಡ ಈ ಬಗ್ಗೆ ವರದಿ ಮಾಡಿದೆ. ಹೊಸ ಮಾದರಿಯ ಸಬ್​ಮರೀನ್​​ ಕ್ಷಿಪಣಿ ಉಡಾವಣೆ ಮಾಡಲಾಗಿದೆ. 5 ವರ್ಷಗಳ ಹಿಂದೆ ಯಾವ ನೌಕೆಯಿಂದ ಈ ಪ್ರಯೋಗ ನಡೆಸಲಾಗಿತ್ತು, ಇದೀಗ ಅದೇ ನೌಕೆಯಿಂದ ಮತ್ತೆ ಪರೀಕ್ಷೆ ನಡೆಸಲಾಗಿದೆ ಅಂತಲೂ ಮಾಹಿತಿ ನೀಡಿದೆ. ಆದ್ರೆ ಈ ಪರೀಕ್ಷೆ ವೇಳೆ ಕಿಮ್ ಜಾಂಗ್ ಉನ್ ಭಾಗಿಯಾಗಿರೋ ಬಗ್ಗೆ ಮಾಧ್ಯಮದಲ್ಲಿ ಉಲ್ಲೇಖಿಸಿಲ್ಲ. ಕಪ್ಪು ಮತ್ತು ಬಿಳಿ ಪಟ್ಟೆ ಇರೋ ಕ್ಷಿಪಣಿ ಸಮುದ್ರ ಮಧ್ಯದಿಂದ ಹಾರುತ್ತಿರೋ ಫೋಟೋವನ್ನು ಮಾಧ್ಯಮಗಳು ವರದಿ ಮಾಡಿವೆ.

ಇದ್ರ ಬೆನ್ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಚ್ಚಿದ ಕೋಣೆಯಲ್ಲಿ ತುರ್ತು ಸಭೆ ನಡೆಸಿದೆ. ಬ್ರಿಟನ್ ಮತ್ತು ಅಮೆರಿಕ ಮನವಿ ಮೇರೆಗೆ ಈ ಸಭೆ ಕರೆಯಲಾಗಿದೆ ಅಂತ ಮೂಲಗಳು ತಿಳಿಸಿವೆ. ಕಳೆದ ಬಾರಿ ಕ್ಷಿಪಣಿ ಪರೀಕ್ಷೆ ನಡೆಸಿದಾಗಲೂ ಇದೇ ರೀತಿಯ ಪರೀಕ್ಷೆ ನಡೆಸಲಾಗಿತ್ತು. ಆದ್ರೆ ಅದ್ರ ಫಲಿತಾಂಶ ಮಾತ್ರ ಶೂನ್ಯವಾಗಿತ್ತು.

-masthmagaa.com

Contact Us for Advertisement

Leave a Reply