ಕೊನೆಗೂ ಬಯಲಾದ ನಾಗಚೈತನ್ಯ ಲವ್ವಿ ಡವ್ವಿ-

masthmagaa.com:

ನಟಿ ನಾಗಚೈತನ್ಯ ತನ್ನ ಲವರ್‌ ಜೊತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಟಿಯ ಜೊತೆಗಿನ ನಾಗಚೈತನ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾಗಚೈತನ್ಯ ಮತ್ತು ನಟಿ ಸಮಂತಾ ಡಿವೋರ್ಸ್‌ಗೆ ಇನ್ನೂ ತನಕ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ ಅಭಿಮಾನಿಗಳು ಮಾತ್ರ ಅವರ ಡಿವೋರ್ಸ್‌ ವಿಷಯಕ್ಕೆ ಈಗಲೂ ಉತ್ಸುಕರಾಗಿ ಪ್ರಶ್ನೆಗಳನ್ನ ಕೇಳ್ತಾ ಇರ್ತಾರೆ. ಸದ್ಯ ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರವಾಗಿ ನಾಗಚೈತನ್ಯ ಸುದ್ದಿಯಲ್ಲಿದ್ದರು. ಅದರ ಬಗ್ಗೆ ಪ್ರಶ್ನಿಸಿದಾಗ ಅದನ್ನ ತಳ್ಳಿ ಹಾಕುತಿದ್ದರು. ಆದರೆ ಕೊನೆಗೂ ನಾಗಚೈತನ್ಯ ಮತ್ತು ಶೋಭಿತ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾರೆ. ನಟಿಯ ಜೊತೆಗಿನ ನಾಗಚೈತನ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಯಾಮ್ ಗುಡ್ ಬೈ ಹೇಳಿದ ಮೇಲೆ ಶೋಭಿತಾ ಜೊತೆ ನಾಗಚೈತನ್ಯ ಡೇಟ್ ಮಾಡ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ.

ಲಂಡನ್‌ನಲ್ಲಿ ಅಭಿಮಾನಿಯೊಬ್ಬನ ಜೊತೆ ನಾಗಚೈತನ್ಯ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ಹಿಂದೆ ಶೋಭಿತಾ ಕೂಡ ಕುಳಿತಿದ್ದಾರೆ. ಲಂಡನ್ ಐಷಾರಾಮಿ ಹೋಟೆಲ್ ಒಂದರಲ್ಲಿ ಭಾರತ ಮೂಲದ ಸುಂದರ್ ಮೋಹನ್ ಕೆಲಸ ಮಾಡುತ್ತಿದ್ದಾರೆ. ಇದೇ ಹೋಟೆಲ್‌ಗೆ ನಾಗ ಚೈತನ್ಯ ಹಾಗೂ ಶೋಭಿತಾ ಆಗಮಿಸಿದ್ದರು. ಈ ವೇಳೆ ನಾಗ ಚೈತನ್ಯ ಜೊತೆ ಸುಂದರ್ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೊದಲ್ಲಿ ಶೋಭಿತಾ ಕೂಡ ಇದ್ದಾರೆ. ಇಷ್ಟು ದಿನ ಡೇಟಿಂಗ್ ವಿಚಾರವನ್ನುತಳ್ಳುತ್ತಾ ಬಂದಿದ್ದ ನಾಗ ಚೈತನ್ಯ ಅವರು ಈಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಈ ಫೋಟೋನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದ ಸುಂದರ್ ಅವರು ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply