ಕ್ರೇಜಿಸ್ಟಾರ್‌ರನ್ನ ಭೇಟಿಯಾದ “ನಾನಿ”

masthmagaa.com:

ಬುಧವಾರ (ಮಾರ್ಚ್‌ 15)ರಂದು ತೆಲುಗು ಫೇಮಸ್‌ ಹೀರೋ ನಾನಿ, ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರನ್ನ ಬೇಟಿ ಮಾಡಿ ಮಾತುಕಾತೆ ನಡೆಸಿದ್ದಾರೆ.


ನಾನಿ ಸದ್ಯ “ದಸರಾ” ಸಿನಿಮಾದ ಪ್ರಾಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಪ್ರಮೋಷನ್‌ ಸಲುವಾಗಿ ಎಲ್ಲಾ ಕಡೆ ಓಡಾಡ್ತಾ ಇದ್ರು, ಸದ್ಯ ಬೆಂಗಳೂರಿಗೆ ಪ್ರಮೋಷನ್‌ಗೆ ಎಂದು ಬಂದಿದ್ದ ಸಂದರ್ಭದಲ್ಲಿ ಕ್ರೇಜಿಸ್ಟಾರ್‌ ಅವರನ್ನ ಮೀಟ್‌ ಮಾಡಿದ್ದಾರೆ. ಈ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗ್ತಾ ಇದೆ. “ದಸರಾ” ಚಿತ್ರ ಮಾರ್ಚ್‌ 30ಕ್ಕೆ ರಿಲೀಸ್‌ ಆಗಲಿದೆ. ಈ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಸಖತ್‌ ಮಾಸ್‌ ಲುಕ್‌ನಲ್ಲಿ ನಾನಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ 10 ಮಿಲಿಯನ್‌ ವ್ಯೂವ್ಸ್‌ ಪಡೆದು ಮುನ್ನುಗ್ತಾ ಇದೆ. ನ್ಯಾಚುರಲ್‌ ಸ್ಟಾರ್‌ ಅಂತಾನೆ ಫೇಮಸ್‌ ಆಗಿರುವ ನಾನಿಯವರ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. “ದಸರಾ” ಚಿತ್ರಕ್ಕೆ ಕೀರ್ತಿ ಸುರೇಶ್‌ ನಾಯಾಕಿಯಾಗಿ ಸ್ಕ್ರೀನ್‌ ಶೇರ್‌ ಮಾಡಿದ್ದು, ಡಿ ಗ್ಲಾಮ್‌ ಲುಕ್‌ನಲ್ಲಿ ಇವರು ಮಿಂಚಲಿದ್ದಾರೆ. ಡಾಲಿ ಧನಂಜಯ್‌ ಅಭಿನಯದ “ಹೊಯ್ಸಳ” ಚಿತ್ರ ಕೂಡ ಮಾರ್ಚ್‌ 30 ಕ್ಕೆ ರಿಲೀಸ್‌ ಆಗಲಿದೆ. ಡಾಲಿ “ಹೊಯ್ಸಳ” ಚಿತ್ರದಲ್ಲಿ ಪೋಲಿಸ್‌ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಎರಡೂ ಚಿತ್ರಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಯಾವ ಚಿತ್ರ ಮೇಲುಗೈ ಸಾಧಿಸಲಿದೆ ಎಂಬುದನ್ನ ಕಾದುನೋಡಬೇಕಿದೆ.

-masthmagaa.com

Contact Us for Advertisement

Leave a Reply