ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡ್ಬೇಕು: ನಾರಾಯಣಮೂರ್ತಿ ಕರೆ

masthmagaa.com:

ಭಾರತದಲ್ಲಿ ವರ್ಕ್‌ ಕಲ್ಚರ್‌ ಬದಲಾಗ್ಬೇಕು. ಯುವಕರಲ್ಲಿ ಶಿಸ್ತು ಹಾಗೂ ಕೆಲಸದಲ್ಲಿ ಪ್ರೊಡಕ್ಟಿವಿಟಿ ಹೆಚ್ಚಾಗ್ಬೇಕು ಅಂತ ಇನ್ಫೊಸಿಸ್‌ ಸ್ಥಾಪಕ ನಾರಾಯಣಮೂರ್ತಿ ಹೇಳಿದ್ದಾರೆ. ಯುಟ್ಯೂಬ್‌ನ ‌ʻ3ಒನ್4‌ ಕ್ಯಾಪಿಟಲ್ʼನ ಪಾಡ್‌ಕ್ಯಾಸ್ಟ್‌ ಒಂದರಲ್ಲಿ ದೇಶದ ಯುವಕರನ್ನು ಕುರಿತು ಇನ್ಸ್‌ಪೈರಿಂಗ್‌ ಮಾತುಗಳನ್ನಾಡಿದ್ದಾರೆ. “ಎರಡನೇ ಮಹಾಯುದ್ಧದ ನಂತರ ಜಪಾನ್‌, ಜರ್ಮನಿಗಳಲ್ಲಿ ಜನರು ಪ್ರತಿದಿನ ಹಲವು ತಾಸುಗಳು ಎಕ್ಸ್‌ಟ್ರಾ ಕೆಲಸ ಮಾಡಿ ದೇಶದ ಆರ್ಥಿಕತೆಗೆ ಕೊಡುಗೆ ನೀಡಿದ್ರು. ಚೀನಾದಂತಹ ದೊಡ್ಡ ಆರ್ಥಿಕತೆಯ ಜೊತೆ ಕಾಂಪಿಟ್‌ ಮಾಡ್ಬೇಕಾದ್ರೆ ನಮ್ಮ ದೇಶದ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡ್ಬೇಕು. ಈಗಲೂ ನಮ್ಮ ದೇಶದ ವರ್ಕ್‌ ಪ್ರೊಡಕ್ಟಿವಿಟಿ ಹಲವು ದೇಶಗಳಿಗಿಂತ ಬಹಳ ಕೆಳಗಿದೆ. ಅದನ್ನ ಹೆಚ್ಚು ಮಾಡಿ, ಭ್ರಷ್ಟಾಚಾರ ಕಡಿಮೆ ಮಾಡಿ ಸರ್ಕಾರದ ಲೆವೆಲ್‌ನಲ್ಲಿ ವೇಗವಾಗಿ ತೀರ್ಮಾನಗಳನ್ನ ತಗೊಳ್ಳೊ ಕಲ್ಚರ್‌ ಬೆಳೆಯಬೇಕು. ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದೆ. ಈ ಯುವ ಸಂಪನ್ಮೂಲ ಸರಿಯಾದ ದಾರಿಯಲ್ಲಿ ಹೋಗ್ಬೇಕು ಅಂತೇಳಿದ್ದಾರೆ”.

-masthmagaa.com

Contact Us for Advertisement

Leave a Reply