ಹೌಡಿ ಮೋದಿ ಎಂದರೇನು..? ಎಷ್ಟು ಗಂಟೆಗೆ ಕಾರ್ಯಕ್ರಮ..?

ಅಮೆರಿಕಾದ ಟೆಕ್ಸಾಸ್‍ನಲ್ಲಿ ಹೌಡಿ ಮೋದಿ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಜ್ಜಾಗಿದೆ. ಹ್ಯೂಸ್ಟನ್‍ನ ಎನ್‍ಆರ್‍ಜಿ ಸ್ಟೇಡಿಯಂನಲ್ಲಿ ಈ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಹೌಡಿ ಅಂದ್ರೆ ಟೆಕ್ಸಾಸ್‍ನಲ್ಲಿ ಮಾತನಾಡುವಾಗ ಬಳಸೋ ಒಂದು ಪದ. ಹೌಡಿ ಅಂದ್ರೆ ಹೇಗಿದ್ದೀರಿ ಎಂದು ಅರ್ಥ. ಹೌಡಿ ಮೋದಿ ಅಂದ್ರೆ ಹೇಗಿದ್ದೀರಿ ಮೋದಿ..? ಎಂದು ಅರ್ಥ ಅಷ್ಟೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೋಂದಣಿಗಾಗಿ ಕರೆ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಹಲವು ದಿನಗಳು ಇರುವಂತೆಯೇ 50 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದು, ಸೀಟುಗಳು ಭರ್ತಿಯಾಗಿವೆ. ಟಿಕೆಟ್ ಸೋಲ್ಡ್ ಔಟ್ ಆದ ನಂತರ ಬಂದವರನ್ನು ವೇಯ್ಟಿಂಗ್ ಲಿಸ್ಟ್‍ನಲ್ಲಿ ಇರಿಸಲಾಗಿದೆ. ಹ್ಯೂಸ್ಟನ್ ನಗರವಾಸಿಗಳು ಮಾತ್ರವಲ್ಲದೆ 48 ರಾಜ್ಯಗಳಿಂದ ಜನಸಾಗರವೇ ಹರಿದು ಬಂದಿದೆ. ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. 9.30ಕ್ಕೆ ಡೊನಾಲ್ಡ್ ಟ್ರಂಪ್ ಮಾತನಾಡಲಿದ್ದು, ರಾತ್ರಿ 10ಕ್ಕೆ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.

Contact Us for Advertisement

Leave a Reply