ಗಾಂಧಿಗೆ `ನಮೋ’ ನಮನ.. ಸೋನಿಯಾರಿಂದಲೂ ಗೌರವ ಸಲ್ಲಿಕೆ

ಇವತ್ತು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ. ಹೀಗಾಗಿ ಪ್ರಧಾನಿ ಮೋದಿಯವರು ರಾಜ್ ಘಾಟ್ ನಲ್ಲಿರೋ ಗಾಂಧಿ ಸ್ಮಾರಕ ಮತ್ತು ವಿಜಯ್ ಘಾಟ್ ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕಕ್ಕೆ ನಮಿಸಿದ್ರು. ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಕ್ಕಳು ಕೂಡ ಮಹಾತ್ಮರಿಗೆ ನಮನ ಸಲ್ಲಿಸಿದ್ರು.

ಇನ್ನು ಸಂಸತ್ತಿಗೆ ತೆರಳಲಿರುವ ಮೋದಿ ಅವರು ಅಲ್ಲಿನ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಅರ್ಪಿಸಲಿದ್ದಾರೆ. ಜೊತೆಗೆ ಇವತ್ತು ಸಂಜೆ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಗೃಹ ಸಚಿವ ಅಮಿತ್ ಶಾ, ದೆಹಲಿಯಲ್ಲಿ ಹಮ್ಮಿಕೊಂಡಿರುವ ಪಕ್ಷದ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ದೆಹಲಿಯಲ್ಲಿನ ಕಾಂಗ್ರೆಸ್ ಕಚೇರಿಯಿಂದ ಶುರವಾಗುವ ಗಾಂಧಿ ಸಂದೇಶ ಪಾದಯಾತ್ರೆಗೆ ಅಧ್ಯಕ್ಷೆ ಅಧ್ಯಕ್ಷೆ ಸೋನಿಯಾ ಗಾಂಧಿ ಚಾಲನೆ ನೀಡಲಿದ್ದಾರೆ.

Contact Us for Advertisement

Leave a Reply