ಸೂರ್ಯ ಅಂತ್ಯವಾಗೋದು ಹೇಗೆ..? ಹೊಸ ರಹಸ್ಯ ಬಿಚ್ಚಿಟ್ಟ ನಾಸಾದ ಹಬಲ್ ಟೆಲಿಸ್ಕೋಪ್

masthmagaa.com:

ಇಡೀ ಜಗತ್ತಿಗೆ ಬೆಳಕು ಕೊಡೋ ಸೂರ್ಯನ ಅಂತ್ಯ ಹೇಗಾಗುತ್ತೆ..? ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾದ ಹಬಲ್ ಟೆಲಿಸ್ಕೋಪ್​​​ ತೆಗೆದಿರೋ ಫೋಟೋದಿಂದ ಸೂರ್ಯನ ಅಂತ್ಯದ ಬಗ್ಗೆ ಅಂದಾಜು ಮಾಡಬಹುದಾಗಿದೆ. ಹಬಲ್ ಟೆಲಿಸ್ಕೋಪ್​ ಎನ್​ಜಿಸಿ 2438 ಪ್ಲಾನೆಟರಿ ನೆಬುಲಾದ ಫೋಟೋ ತೆಗೆದಿದೆ. ಇದು ಸೂರ್ಯನ ರೀತಿಯದ್ದೇ ಒಂದು ನಕ್ಷತ್ರವಾಗಿದೆ. ಭೂಮಿಯಿಂದ 1370 ಲೈಟ್ ಇಯರ್ಸ್ ದೂರದಲ್ಲಿದೆ. 1 ಲೈಟ್ ಇಯರ್ ಅಂದ್ರೆ 9.5 ಲಕ್ಷ ಕೋಟಿ ಕಿಲೋಮೀಟರ್ ಆಗುತ್ತೆ. ಇದು ಅಳಿವಿನಂಚಿನಲ್ಲಿರೋ ನಕ್ಷತ್ರವಾಗಿದ್ದು, ಇದ್ರಲ್ಲಿ ಹಲವಾರು ಕಲರ್​​ಗಳು ಪತ್ತೆಯಾಗಿವೆ. ನೀಲಿ ಬಣ್ಣದ ಆಕ್ಸಿಜನ್, ಹಸಿರು ಬಣ್ಣದ ಹೈಡ್ರೋಜನ್, ಕೇಸರಿ ಬಣ್ಣದ ನೈಟ್ರೋಜನ್, ಕೆಂಪು ಬಣ್ಣದ ಸಲ್ಫರ್ ಇದ್ರಲ್ಲಿ ಕಾಣುತ್ತೆ. ಇದ್ರಿಂದ ಸೂರ್ಯ ಕೂಡ ತನ್ನ ಅವಧಿ ಅಂತ್ಯವಾದಾಗ ಅಸ್ಥಿರವಾಗುತ್ತೆ. ಬಿಳಿ ಬಣ್ಣದ ಸಣ್ಣ ಗೋಳದ ರೀತಿ ಕಾಣಿಸುತ್ತೆ. ಬೇರೆ ನಕ್ಷತ್ರಗಳಿಗೆ ಹೋಲಿಸಿದ್ರೆ ಸೂರ್ಯ ಸ್ವಲ್ಪ ಕಡಿಮೆ ಹೊಳೆಯುತ್ತಾನೆ ಅಂತ ಅಂದಾಜು ಮಾಡಲಾಗಿದೆ. ಹಾಗಂತ ಇವತ್ತೋನಾಳೆನೋ ಸೂರ್ಯನ ಅವಧಿ ಮುಗಿದು ಹೋಗೋದಿಲ್ಲ. ಸೂರ್ಯ ಸೃಷ್ಟಿಯಾಗಿ 450 ಕೋಟಿ ವರ್ಷ ಕಳೆದೋಗಿದೆ. ಇನ್ನೂ ಸೂರ್ಯನ ಆಯಸ್ಸು ಕಳೆದಿರೋದು ಅರ್ಧದಷ್ಟು ಮಾತ್ರ. ಇನ್ನೂ 450 ಕೋಟಿ ವರ್ಷ ಸೂರ್ಯ ಇದೇ ರೀತಿ ಉರಿಯುತ್ತಲೇ ಇರುತ್ತಾನೆ.

-masthmagaa.com

Contact Us for Advertisement

Leave a Reply