SpaceXನ ಸಾಲು ಸಾಲು ಉಪಗ್ರಹಗಳಿಗೆ NASA ತೀವ್ರ ಕಳವಳ!

masthmagaa.com:

ಸ್ಪೇಸ್‌-ಎಕ್ಸ್‌ 30,000 ಉಪಗ್ರಹಗಳನ್ನ ನಿಯೋಜಿಸುವ ಯೋಜನೆ ಕುರಿತು ನಾಸಾ ಕಳವಳ ವ್ಯಕ್ತಪಡಿಸಿದೆ. ಎಲಾನ್‌ ಮಸ್ಕ್‌ರ ಸ್ಪೇಸ್​​ಎಕ್ಸ್ ಕಂಪನಿ ಸ್ಟಾರ್​​ಲಿಂಕ್​ ಮೂಲಕ ಇಂಟರ್‌ನೆಟ್‌ ಒದಗಿಸಲು 12,000 ಉಪಗ್ರಹಗಳನ್ನು ನಿಯೋಜಿಸುವ ಅನುಮತಿ ಪಡೆದಿದೆ. ಈಗ ಅದರ ಮುಂದಿನ ಭಾಗವಾಗಿ ಮತ್ತೆ 30,000 ಉಪಗ್ರಹಗಳನ್ನು ನಿಯೋಜಿಸಲು ಅನುಮತಿ ಕೇಳಿದೆ. ಇದಕ್ಕೆ ಕಳವಳ ವ್ಯಕ್ತಪಡಿಸಿ ಫೆಡರಲ್‌ ಕಮ್ಯುನಿಕೇಷನ್‌ ಕಮಿಷನ್‌ಗೆ ಪತ್ರ ಬರೆದಿರುವ ನಾಸಾ ಅಷ್ಟೊಂದು ಉಪಗ್ರಹಗಳು ಬಾಹ್ಯಾಕಾಶ ಸೇರಿದ್ರೆ ನಾಸಾದ ವೈಜ್ಞಾನಿಕ ಮತ್ತು ಹ್ಯುಮನ್‌ ಸ್ಪೇಸ್‌ಫ್ಲೈಟ್‌ ಮಿಷನ್‌ಗಳಿಗೆ ತೊಂದರೆಯಾಗಬಹುದು ಅಂತ ಹೇಳಿದೆ. ಈಗಾಗಲೆ ಭೂಮಿಯಿಂದ ಕಳುಹಿಸಿದ 25,000 ಬಾಹ್ಯಾಕಾಶ ವಸ್ತುಗಳು ಆರ್ಬಿಟ್‌ನಲ್ಲಿ ಇದ್ದು, ಇನ್ನು 600 ಕಿ.ಮೀ ಕೆಳಗೆ 6,100 ವಸ್ತುಗಳು ಇವೆ. ಈಗ ಸ್ಪೇಸ್‌-ಎಕ್ಸ್‌ನ Gen2 ಯೋಜನೆಯಿಂದ ಆರ್ಬಿಟ್‌ನಲ್ಲಿರುವ ವಸ್ತುಗಳು ಈಗಿರುವದಕ್ಕಿಂತ ಎರಡು ಪಟ್ಟು ಹೆಚ್ಚಾಗುವುದು ಮತ್ತು 600 ಕಿ.ಮೀ ಕೆಳಗೆ ಇರುವ ಬಾಹ್ಯಾಕಾಶ ವಸ್ತುಗಳು ಐದು ಪಟ್ಟು ಹೆಚ್ಚಾಗುವುದು ಅಂತ ನಾಸಾ ಹೇಳಿದೆ. ಇದೇ ರೀತಿ ಯೋಜನೆಗಳನ್ನು ಹೊಂದಿರುವ ಅಮೇಜಾನ್‌, ಡಿಶ್‌ ನೆಟ್‌ವರ್ಕ್‌ ಕೂಡ ನಾಸಾ ರೀತಿಯೇ FCCಯೊಂದಿಗೆ ಕಳವಳ ವ್ಯಕ್ತಪಡಿಸಿವೆ.)
ಈ ಮಧ್ಯೆ ಸ್ಪೇಸ್‌-ಎಕ್ಸ್​ ಫೆಬ್ರವರಿ ಲಾಂಚ್ ಮಾಡಿದ್ದ 49 ಸ್ಯಾಟಲೈಟ್​​ಗಳಲ್ಲಿ 40 ಸ್ಯಾಟ್‌ಲೈಟ್‌ಗಳು ಜಿಯೊಮ್ಯಾಗ್ನೆಟಿಕ್‌ ಸ್ಟಾರ್ಮ್‌ನಿಂದ ನಾಶವಾಗಿವೆ ಅಂತ ಕಂಪನಿ ಹೇಳಿಕೊಂಡಿದೆ. ಭೂಮಿಯ ಕೆಳಹಂತದ ಕಕ್ಷೆಯಲ್ಲಿ 12,000 ಸ್ಯಾಟ್‌ಲೈಟ್‌ ಗುಚ್ಛ ರೂಪಿಸಿ ಜಗತ್ತಿನ ರಿಮೋಟ್‌ ಪ್ರದೇಶಗಳಿಗೂ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸುವ ಗುರಿ ಇಟ್ಕೊಂಡಿರೊ ಸ್ಪೇಸ್-‌ಎಕ್ಸ್‌ಗೆ 40 ಸ್ಯಾಟ್‌ಲೈಟ್‌ ದೊಡ್ಡ ಸಂಖ್ಯೆ ಏನಲ್ಲ. ಆದ್ರೆ ಇಷ್ಟು ಸ್ಯಾಟ್‌ಲೈಟ್‌ಗಳನ್ನ ಕಕ್ಷೆಗೆ ಸೇರಿಸಲು ಒಂದು ರಾಕೆಟ್‌ ಬೇಕಾಗುತ್ತೆ, ಆದ್ದರಿಂದ ಇದು ಸ್ಪೇಸ್‌-ಎಕ್ಸ್‌ಗೆ ಸಣ್ಣ ಹಿನ್ನಡೆ.
ಇನ್ನು ಟೆಸ್ಲಾ ಕಂಪನಿ ಅಮೆರಿಕದ ಫ್ಯಾಕ್ಟರಿಯೊಂದರಲ್ಲಿ ಜನಾಂಗೀಯ ಬೇಧ ಮಾಡುತ್ತೆ ಅಂತ ಕ್ಯಾಲಿಫೋರ್ನಿಯಾದ ಏಜೆನ್ಸಿ ಒಂದು ಆರೋಪ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಟೆಸ್ಲಾ ತಾನು ಎಲ್ಲ ರೀತಿಯ ತಾರತಮ್ಯಗಳನ್ನ ವಿರೋಧಿಸುತ್ತದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply