ಚಂದ್ರನ ಮೇಲೆ ವೈಫೈ ನೆಟ್ವರ್ಕ್ ಸ್ಥಾಪಿಸಲು ನಾಸಾ ಪ್ಲಾನ್​!

masthmagaa.com:

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಚಂದ್ರನ ಮೇಲೆ ವೈಫೈ ನೆಟ್ವರ್ಕ್​ ಸ್ಥಾಪಿಸೋ ಬಗ್ಗೆ ಚಿಂತನೆ ನಡೆಸ್ತಿದೆ ಅಂತ ಅಧ್ಯಯನವೊಂದ್ರಲ್ಲಿ ಗೊತ್ತಾಗಿದೆ. ನಾಸಾದ ಗ್ಲೆನ್ ರಿಸರ್ಚ್ ಸೆಂಟರ್​ನಲ್ಲಿರೋ ಕಂಪಾಸ್ ಲ್ಯಾಬ್​ ಈ ಅಧ್ಯಯನ ನಡೆಸಿದೆ. ಇದ್ರ ನಿರ್ದೇಶಕಿಯಾಗಿರೋ ಮೇರಿ ಲೋಬೋ ಅಧ್ಯಯನ ಬಗ್ಗೆ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಚಂದ್ರನ ಮೇಲೆ ವೈಫೈ ನೆಟ್ವರ್ಕ್ ಸ್ಥಾಪನೆ ಸಾಧ್ಯವಾದ್ರೆ ಭೂಮಿಯ ಕೆಲ ಪ್ರದೇಶದಲ್ಲಿ ಇಂಟರ್​ನೆಟ್ ಸಂಪರ್ಕದ ಕೊರತೆಯನ್ನು ಕೂಡ ಸರಿದೂಗಿಸಲಿದೆ ಮತ್ತು ನಾಸಾದ ಆರ್ಟೆಮಿಸ್​​​​ ಪ್ರೋಗ್ರಾಂಗೂ ಸಹಾಯವಾಗಲಿದೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಮನುಷ್ಯರನ್ನು ಇಳಿಸೋದು ಈ ಆರ್ಟೆಮಿಸ್ ಯೋಜನೆಯ ಉದ್ದೇಶವಾಗಿದೆ.

-masthmagaa.com

Contact Us for Advertisement

Leave a Reply