6 ತಿಂಗಳ ನಂತ್ರ ಭೂಮಿಗೆ ಇಳಿದ NASA ಗಗನಯಾತ್ರಿಗಳು

masthmagaa.com:

ನಾಸಾದ ಸೈಂಟಿಫಿಕ್​​ ಮಿಷನ್​​ ಹಿನ್ನೆಲೆ ಕಳೆದ 6 ತಿಂಗಳಿನಿಂದ ಇಂಟರ್​​ನ್ಯಾಷನಲ್​ ಸ್ಪೇಸ್​​ ಸ್ಟೇಷನ್​​ನಲ್ಲಿದ್ದ ನಾಲ್ವರು ಗಗನ ಯಾತ್ರಿಗಳು ಸೋಮವಾರ ರಾತ್ರಿ ಸೇಫಾಗಿ ಲ್ಯಾಂಡ್​ ಆಗಿದ್ದಾರೆ. ಇವರಿದ್ದ ಸ್ಪೇಸ್​ಎಕ್ಸ್ ಕ್ರೂ ಡ್ರಾಗನ್​ ಕ್ಯಾಪ್ಸೂಲ್​​ ಅಮೆರಿಕದ ಫ್ಲೋರಿಡಾ ರಾಜ್ಯದ ಕರಾವಳಿಯಲ್ಲಿರೋ ಗಲ್ಫ್​ ಆಫ್​ ಮೆಕ್ಸಿಕೋದಲ್ಲಿ ಲ್ಯಾಂಡ್​​ ಆಗಿದೆ. ಪ್ಯಾರಚೂಟ್ ಮೂಲಕ ಲ್ಯಾಂಡ್​ ಆಗಿದೆ. ಬಳಿಕ ಕ್ಯಾಪ್ಸೂಲ್​ನಿಂದ ಒಬ್ಬೊಬ್ಬರಾಗೇ ಗಗನಯಾತ್ರಿಗಳನ್ನ ಹೊರತೆಗೆದು ಸ್ಟ್ರೆಚರ್​​ನಲ್ಲಿ ಮಲಗಿಸಿ ಕರೆದುಕೊಂಡು ಹೋಗಲಾಯ್ತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿ ಮೇಲೆ ಲ್ಯಾಂಡ್​ ಆಗುವವರಗಿನ ಜರ್ನಿ 8 ಗಂಟೆಯದ್ದಾಗಿತ್ತು. ಇದರಲ್ಲಿ ಒಂದೂವರೆ ಗಂಟೆ ಸ್ಪೇಸ್​ ಸ್ಟೇಷನ್​ ಸುತ್ತಲೂ ಲೂಪ್​ ಮಾಡಿ ಅದರ ಫೋಟೋಗಳನ್ನ ತೆಗೆಯಲಾಗಿತ್ತು. ಅಂದ್ಹಾಗೆ ನಾಲ್ವರು ಗಗನಯಾತ್ರಿಗಳಲ್ಲಿ ಇಬ್ಬರು ಅಮೆರಿಕನ್ನರು, ಓರ್ವ ಫ್ರಾನ್ಸ್, ಮತ್ತೋರ್ವ ಜಪಾನ್​​ನವರು ಆಗಿದ್ದಾರೆ. ಇವರೆಲ್ಲಾ ಈ ವರ್ಷದ ಏಪ್ರಿಲ್​​ 24ರಂದು ಇಂಟರ್​ನ್ಯಾಷನಲ್​ ಸ್ಪೇಸ್​ ಸ್ಟೇಷನ್​ಗೆ ಹೋಗಿದ್ರು. ಅಲ್ಲಿ ನೂರಾರು ಎಕ್ಸ್​​ಪರಿಮೆಂಟ್​​ಗಳನ್ನ ಮಾಡಿದ್ದರು. ಮತ್ತು ಐಎಸ್​ಎಸ್​ನ ಸೋಲಾರ್ ಪ್ಯಾನಲ್​ ಅನ್ನ ಅಪ್​ಗ್ರೇಡ್​ ಮಾಡಲು ಸಹಕರಿಸಿದ್ದರು ಅಂತ ನಾಸಾ ಹೇಳಿದೆ. ಇವರೆಲ್ಲಾ ಭಾನುವಾರವೇ ಲ್ಯಾಂಡ್​ ಆಗಬೇಕಿತ್ತು. ಆದ್ರೆ ಹವಾಮಾನ ವೈಪರಿತ್ಯ ಹಿನ್ನೆಲೆ ಡಿಪಾರ್ಚರ್ ಅನ್ನ ಒಂದು ದಿನ ಮುಂದೂಡಲಾಗಿತ್ತು.

-masthmagaa.com

Contact Us for Advertisement

Leave a Reply