2030ರ ದಶಕದಲ್ಲಿ ಹೆಚ್ಚಾಗಲಿದೆಯಂತೆ ಪ್ರವಾಹ! ಕಾರಣ ಏನು ಗೊತ್ತಾ?

masthmagaa.com:

ಸೂರ್ಯನ ಸುತ್ತ ಭೂಮಿ ಸುತ್ತುತ್ತೆ. ಭೂಮಿ ಸುತ್ತ ಚಂದ್ರ ಸುತ್ತತ್ತೆ. ಆದ್ರೆ ಹವಾಮಾನ ವೈಪರಿತ್ಯದಿಂದ ಚಂದ್ರನ ಕಕ್ಷೆಯ ಚಲನೆಯಲ್ಲಿ ಬದಲಾವಣೆ ಆಗೋದ್ರಿಂದ ಸಮುದ್ರ ಮಟ್ಟ ಹೆಚ್ಚಾಗಿ ಜಗತ್ತಿನಾದ್ಯಂತ ವಿನಾಶಕಾರಿ ಪ್ರವಾಹಗಳ ಸಂಖ್ಯೆ ಹೆಚ್ಚಾಗಲಿದೆ ಅಂತ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ. ಅಧ್ಯಯನದ ಪ್ರಕಾರ, ಈಗ ಏಳುತ್ತಿರೋ ಸಮುದ್ರದ ಅಲೆಗಿಂತ 2 ಅಡಿ ಎತ್ತರದ ಅಲೆಗಳು ಏಳಲಿವೆ. ಇದರಿಂದ ಸಮುದ್ರ ತೀರದ ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತೆ. ಜನಜೀವನ ಅಸ್ತವ್ಯಸ್ತ ಆಗಲಿದೆ. 2030ರ ದಶಕದ ಮಧ್ಯಭಾಗದ ಬಳಿಕ ಇಂಥಾ ಪ್ರವಾಹಗಳು ಆಗಾಗ ಬರ್ತಾನೇ ಇರ್ತಾವೆ ಅಂತ ಅಧ್ಯಯನದಲ್ಲಿ ಹೇಳಲಾಗಿದೆ. ಅಮೆರಿಕ ಕರಾವಳಿಯಲ್ಲಿ ಸಮುದ್ರದ ಅಲೆಗಳು ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿ ಕನಿಷ್ಠ 10 ವರ್ಷಗಳ ಕಾಲ ಇರಲಿವೆ ನಾಸಾ ಹೇಳಿದೆ. ಚಂದ್ರನ ಗುರುತ್ವಾಕರ್ಷಣೆ, ಹೆಚ್ಚುತ್ತಿರುವ ಸಮುದ್ರ ಮಟ್ಟ ಮತ್ತು ಹವಾಮಾನ ಬದಲಾವಣೆಯ ಸಂಯೋಜನೆಯು ಪ್ರಪಂಚದಾದ್ಯಂತ ಕರಾವಳಿ ಪ್ರದೇಶದಲ್ಲಿ ಪ್ರವಾಹವನ್ನ ಉಲ್ಬಣಗೊಳಿಸುತ್ತೆ ಅಂತ ನಾಸಾದ ಅಡ್ಮಿನಿಸ್ಟ್ರೇಟರ್ ಬಿಲ್ ನೆಲ್ಸನ್ ಹೇಳಿದ್ದಾರೆ. ನಾಸಾದ ಈ ಅಧ್ಯಯನ ವರದಿ ನೇಚರ್ ಕ್ಲೈಮೆಟ್​ ಚೇಂಜ್ ಅನ್ನೋ ಜರ್ನಲ್​ನಲ್ಲಿ ಜೂನ್​ 21ನೇ ತಾರೀಖು ಪ್ರಕಟವಾಗಿದೆ.

-masthmagaa.com

Contact Us for Advertisement

Leave a Reply