ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದ ನಾಸಾದ ಓರಿಯಾನ್‌ ಬಾಹ್ಯಾಕಾಶ ನೌಕೆ!

masthmagaa.com:

ಹಲವು ಏಳು ಬೀಳುಗಳ ನಡುವೆಯೂ ನಾಸಾದ ಆರ್ಟೆಮಿಸ್‌ ಮಿಷನ್‌ನ ಓರಿಯನ್‌ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿದೆ ಅಂತ ನಾಸಾ ಹೇಳಿದೆ. ಚಂದ್ರನಿಂದ 40 ಸಾವಿರ ಮೈಲು ಅಂದ್ರೆ ಸುಮಾರು 64 ಸಾವಿರ ಕಿಲೋ ಮೀಟರ್ ದೂರದ ಕಕ್ಷೆಯಲ್ಲಿ ಓರಿಯನ್‌ ಹಾರಾಟ ನಡೆಸಲಿದೆ ಅಂತ ನಾಸಾ ಹೇಳಿದೆ. ಈ ಮಾನವ ರಹಿತ ಮಿಷನ್‌ನ ಮೊದಲ ಪರೀಕ್ಷೆ ಸಕ್ಸಸ್‌ ಆಗೋದ್ರ ಜೊತೆಗೆ ಸೇಫ್‌ ಕೂಡ ಇದೆ. ಈ ಒರಾಯನ್ ನೌಕೆ ಚಂದ್ರನ ಕಕ್ಷೆಯಲ್ಲಿದ್ದೇ ಬಾಹ್ಯಾಕಾಶದ ವಾತಾವರಣವನ್ನ ಸಹ ಆಳವಾಗಿ ಅಧ್ಯಯನ ಮಾಡುತ್ತೆ ಅಂತ ನಾಸಾ ತಿಳಿಸಿದೆ.

-masthmagaa.com

Contact Us for Advertisement

Leave a Reply