ಗಾಂಧಿ ಕುಟುಂಬದ ನ್ಯಾಷನಲ್‌ ಹೆರಾಲ್ಡ್‌ ಕೇಸ್‌ಗೆ 751.9 ಕೋಟಿ ರೂ ಆಸ್ತಿ ಜಪ್ತಿ!

masthmagaa.com:

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ಗೆ ಸಂಬಂಧಿಸಿದಂತೆ 751.9 ಕೋಟಿ ರುಪಾಯಿ ಮೌಲ್ಯದ ಆಸ್ತಿಗಳನ್ನ ಜಪ್ತಿ ಮಾಡಲಾಗಿದೆ ಅಂತ ಜಾರಿ ನಿರ್ದೇಶನಾಲಯ(ED) ಹೇಳಿದೆ. ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಮೂಲಕ ಗಾಂಧಿ ಕುಟುಂಬ ಮನಿ ಲಾಂಡರಿಂಗ್‌ ಮತ್ತು ಅಕ್ರಮ ಆಸ್ತಿ ಸಂಪಾದಿಸಿದೆ ಅನ್ನೊ ಆರೋಪ ಎದುರಿಸ್ತಿದೆ. ಈ ಬಗ್ಗೆ 2012ರಲ್ಲಿ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ನೀಡಿದ ದೂರಿನ ಆಧಾರದ ಮೇಲೆ ED ತನಿಖೆ ನಡಿಸುತ್ತಿದೆ. ಇದೀಗ ಈ ಕೇಸ್‌ಗೆ ಸಂಬಂಧಿಸಿದ ಹೆಚ್ಚುವರಿ ಸ್ಥಿರಾಸ್ತಿಗಳನ್ನ ಜಪ್ತಿ ಮಾಡಲಾಗಿದೆ ಅಂತೇಳಿದೆ. Associated Journals Ltd (AJL) ಅನ್ನೊ ಪಬ್ಲಿಷಿಂಗ್‌ ಕಂಪನಿಗೆ ಸೇರಿದ ಆಸ್ತಿಗಳನ್ನ ಗಾಂಧಿ ಕುಟುಂಬ ಅಕ್ರಮವಾಗಿ ಪಡೆದಿದೆ ಅಂತ ED ಹೇಳಿದೆ. EDಯ ಈ ನಡೆಯನಡೆಯನ್ನ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ವಿರೋಧಿಸಿದ್ದಾರೆ. “ಜಾರಿ ನಿರ್ದೇಶನಾಲಯ ಹೊಸ ಆಸ್ತಿಗಳನ್ನ ಈ ಕೇಸ್‌ನಲ್ಲಿ ಜಪ್ತಿ ಮಾಡಿರೋದು ನೋಡಿದ್ರೆ ಪಂಚರಾಜ್ಯ ಚುನಾವಣೆ ಬಗ್ಗೆ ಬಿಜೆಪಿ ಪ್ಯಾನಿಕ್‌ ಆಗ್ತಿರೋದು ಗೊತ್ತಾಗ್ತಿದೆ. ಅದ್ರಿಂದ್ಲೆ ಸರ್ಕಾರದ ಏಜೆನ್ಸಿಗಳನ್ನ ದುರ್ಬಳಕೆ ಮಾಡ್ಕೊಳ್ಳೊ ತನ್ನ ಚಾಳಿಯನ್ನ ಮುಂದುವರೆಸಿದೆ. ಎಲೆಕ್ಷನ್‌ ಹತ್ರ ಬಂದಾಗ ಇವ್ರು ಹೀಗೆ ಮಾಡೋದು ಹೊಸದೇನಲ್ಲ. ಈಗ ಅದು ಜಗಜ್ಜಾಹೀರಾಗಿದೆ” ಅಂತ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply