ಪೂರ್ವ ಏಷ್ಯಾವನ್ನ ಯುರೋಪ್‌ ನಿರ್ಲಕ್ಷ್ಯ ಮಾಡಲ್ಲ ಎಂದ ನ್ಯಾಟೊ!

masthmagaa.com:

ಇಂಡೋ-ಪೆಸಿಫಿಕ್‌ ಪ್ರದೇಶದ ಪಾರ್ಟ್ನರ್‌ ದೇಶಗಳ ಜೊತೆ ಸೇರಿ ನ್ಯಾಟೊ ಕೆಲಸ ಮಾಡೋದು ತುಂಬ ಪ್ರಮುಖವಾದುದು ಅಂತ ನ್ಯಾಟೊ ಸೆಕ್ರೆಟರಿ ಜನರಲ್ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ. ಪೂರ್ವ ಏಷ್ಯಾದಲ್ಲಿ ಅಂದ್ರೆ ಚೀನಾ, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಜಪಾನ್‌ ಮತ್ತು ತೈವಾನ್‌ನಲ್ಲಿ ಏನಾಗ್ತಿದೆ ಅನ್ನೊದನ್ನ ಯುರೋಪ್‌ ನಿರ್ಲಕ್ಷಿಸೋಕೆ ಸಾಧ್ಯವಿಲ್ಲ. ಯಾಕೆ ಅಂದ್ರೆ ಜಾಗತಿಕ ಭದ್ರತೆ ಪರಸ್ಪರ ಸಂಬಂಧವನ್ನ ಹೊಂದಿದೆ. ಅತ್ಯಂತ ಅಪಾಯಕಾರಿ ಮತ್ತು ಅನಿರೀಕ್ಷಿತವಾಗಿರೋ ಪ್ರಪಂಚವನ್ನ ಫೇಸ್‌ ಮಾಡೋಕೆ ಇಂಡೋ-ಪೆಸಿಫಿಕ್‌ ಪಾರ್ಟನರ್ಸ್‌ ಜೊತೆ ಕೆಲಸ ಮಾಡೋದು ನಮಗೆ ಅವಶ್ಯಕ ಅಂತ ಸ್ಟೋಲ್ಟೆನ್‌ಬರ್ಗ್ ಅಭಿಪ್ರಾಯಪಟ್ಟಿದ್ದಾರೆ. ಅಲ್ದೆ ಭದ್ರತೆ ಹೇಗೆ ಪರಸ್ಪರ ಸಂಬಂಧ ಹೊಂದಿದೆ ಅನ್ನೋದನ್ನ ಯುಕ್ರೇನ್‌-ರಷ್ಯಾ ಯುದ್ಧ ತೋರಿಸುತ್ತೆ. ಯುರೋಪ್‌ನಲ್ಲಿ ಏನಾಗುತ್ತೆ ಅದು ಪೂರ್ವ ಏಷ್ಯಾದ ಮೇಲೆ ಪರಿಣಾಮ ಬೀರುತ್ತೆ. ಅದೇ ರೀತಿ ಪೂರ್ವ ಏಷ್ಯಾದಲ್ಲಿ ಏನಾಗುತ್ತೆ ಅನ್ನೊದು ಯುರೋಪ್‌ಗೆ ಮ್ಯಾಟರ್‌ ಆಗುತ್ತೆ ಅಂತ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply