ರಷ್ಯಾ ವಿರುದ್ಧ ನ್ಯಾಟೋ ಹೊಸ ತಂತ್ರ! ಏನದು?

masthmagaa.com:

ರಷ್ಯಾ ವಿರುದ್ಧ ಹೋರಾಡಲು ನ್ಯಾಟೋ ತನ್ನ ಗಡಿಗಳಲ್ಲಿ ಶಾಶ್ವತ ಮಿಲಿಟರಿ ನೆಲೆಗಳನ್ನು ಸ್ಥಾಪಿಸಲು ಪ್ಲಾನ್ ಮಾಡ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲನ್​ಬರ್ಗ್​​​, ನಾವೀಗ ನೋಡ್ತಿರೋದು ಹೊಸ ರಿಯಾಲಿಟಿ.. ಹೀಗಾಗಿ ಸದಸ್ಯ ದೇಶಗಳಲ್ಲಿ ಸೇನೆಯನ್ನು ಮರು ನಿಯೋಜಿಸೋ ಬಗ್ಗೆ, ಅದಕ್ಕಿರೋ ಅವಕಾಶಗಳ ಬಗ್ಗೆ ಮಾಹಿತಿ ನೀಡುವಂತೆ ಸೇನಾ ಕಮಾಂಡರ್​ಗಳಿಗೆ ಸೂಚಿಸಿದ್ದೀವಿ ಅಂತ ಹೇಳಿದ್ದಾರೆ. ಜೊತೆಗೆ ಸೇನೆಯ ಮರು ನಿಯೋಜನೆ ಬಗ್ಗೆ ಸ್ಪೇನ್​​ನ ಮ್ಯಾಡ್ರಿಡ್​ನಲ್ಲಿ ನಡೆಯಲಿರೋ ನ್ಯಾಟೋ ಶೃಂಗಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ತೀವಿ ಅಂತ ಕೂಡ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply