ಯುಕ್ರೇನ್​​ನಲ್ಲಿ 40 ಸಾವಿರ ಸೈನಿಕರನ್ನು ಕಳ್ಕೊಳ್ತಾ ರಷ್ಯಾ?

masthmagaa.com:

ಯುಕ್ರೇನ್ ಮೇಲಿನ ದಾಳಿಯಲ್ಲಿ ಈವರೆಗೆ ರಷ್ಯಾ 40 ಸಾವಿರ ಸೈನಿಕರನ್ನು ಕಳ್ಕೊಂಡಿದೆ ಅಂತ ನ್ಯಾಟೋ ತಜ್ಞರು ಅಂದಾಜಿಸಿದ್ದಾರೆ. ಅಂದ್ರೆ ಎಲ್ಲರೂ ಸಾವನ್ನಪ್ಪಿದ್ದಾರೆ ಅಂತರ್ಥವಲ್ಲ.. ಸಾವನ್ನಪ್ಪಿರೋದು, ಗಾಯಗೊಂಡಿರೋದು, ಯುಕ್ರೇನ್​ನಲ್ಲಿ ಸೆರೆಯಾಗಿರೋ ಎಲ್ಲರನ್ನು ಸೇರಿಸಿದ್ರೆ ಆ ಸಂಖ್ಯೆ 40 ಸಾವಿರದಷ್ಟಾಗುತ್ತೆ ಅಂತ ಹೇಳಿದ್ದಾರೆ. ಇವರಲ್ಲಿ 7ರಿಂದ 15 ಸಾವಿರ ರಷ್ಯಾ ಸೈನಿಕರು ಪ್ರಾಣ ಕಳ್ಕೊಂಡಿರಬಹುದು ಅಂತ ಲೆಕ್ಕಾಚಾರ ಮಾಡಲಾಗಿದೆ. ಈ ಲಾಸ್ ರಷ್ಯಾದ ಸೇನೆ ಮೇಲೆ ನೈತಿಕವಾಗಿ ದೊಡ್ಡಮಟ್ಟದ ಪರಿಣಾಮ ಬೀರಿದೆ. ಇದೇ ರೀತಿ ರಷ್ಯಾ ನಷ್ಟ ಅನುಭವಿಸ್ತಾ ಸಾಗಿದ್ರೆ ಯುದ್ಧದಲ್ಲಿ ಸಕ್ಸಸ್ ಆಗೋದು ಕಷ್ಟ ಅಂತ ನ್ಯಾಟೋ ತಿಳಿಸಿದೆ. ಜೊತೆಗೆ 2ನೇ ವಿಶ್ವಯುದ್ಧದ ಬಳಿಕ ರಷ್ಯಾ ಇದೇ ಮೊದಲ ಬಾರಿಗೆ ತನ್ನ ಸೇನಾ ಕಮಾಂಡರ್​​ಗಳನ್ನು ದೊಡ್ಡಮಟ್ಟದಲ್ಲಿ ಕಳೆದುಕೊಂಡಿದೆ. ಇತ್ತೀಚೆಗೆ ಕರ್ನಲ್ ಅಲೆಕ್ಸೀ ಶಾರೋವ್ ಕೂಡ ಬಲಿಯಾಗಿದ್ದಾರೆ. ಈ ಮೂಲಕ ರಷ್ಯಾದ ಟಾಪ್ 20 ಕಮಾಂಡರ್​ಗಳ ಪೈಕಿ 6 ಮಂದಿ ಬಲಿಯಾದಂತಾಗಿದೆ. ಪುಟಿನ್ ಸೇನೆ ಯುಕ್ರೇನ್ ರಾಜಧಾನಿ ಕಿಯೆವ್​​, ಚೆರ್ನಿಹಿವ್​​, ಖಾರ್ಕೀವ್​ನಲ್ಲಿ ನಿರಂತರವಾಗಿ ದಾಳಿ ಮುಂದುವರಿಸಿದ್ದು, ದಕ್ಷಿಣದಲ್ಲಿ ದೊಡ್ಡಮಟ್ಟದ ಲಾಸ್​​ನೊಂದಿಗೆ ಸ್ವಲ್ಪ ಪ್ರಗತಿ ಸಾಧಿಸಿದೆ. ಆದ್ರೂ ಕೂಡ ರಷ್ಯಾ ವಶದಲ್ಲಿರೋ ಏಕೈಕ ನಗರ ಖೇರ್ಸನ್​​ನ್ನು ಮರಳಿ ವಶಕ್ಕೆ ಪಡೆಯಲು ಯುಕ್ರೇನ್ ಪ್ರಯತ್ನ ಪಡ್ತಿದೆ ಅಂತ ಕೂಡ ತಜ್ಞರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply