ಸಲ್ಮಾನ್‌ ಖಾನ್‌ ಪಕ್ಷಪಾತ ಮಾಡ್ತಾರೆ ಎಂದು ಆರೋಪ ಮಾಡಿದ ನವಾಜುದ್ದೀನ್‌ ಪತ್ನಿ !

masthmagaa.com:

ಬಿಗ್‌ಬಾಸ್‌ ರಿಯಾಲಿಟಿ ಶೋದಲ್ಲಿ ಪಕ್ಷಪಾತ ಮಾಡ್ತಾರೆ ಅಂತ ಆಲಿಯಾ ಸಿದ್ದಿಕಿ ಆರೋಪ ಮಾಡಿದ್ದಾರೆ. ಕಳೆದ ವರ್ಷದಿಂದ ಬಿಗ್‌ ಬಾಸ್‌ OTT ಹಿಂದಿಯಲ್ಲಿ ಶುರುವಾಗಿತ್ತು. ಈಗ 2ನೇ ಸೀಸನ್‌ ಶುರುವಾಗಿದೆ. ಈ ಸೀಸನ್‌ನಲ್ಲೂ ಸಲ್ಮಾನ್‌ ಖಾನ್‌ ಕಾರ್ಯಕ್ರಮದ ನಿರೂಪಣೆ ಮಾಡ್ತಾ ಇದ್ದಾರೆ. ಸಲ್ಮಾನ್‌ ಖಾನ್‌ ಪಾರ್ಷಾಲಿಟಿ ಮಾಡ್ತಾರೆ ಅಂತ ನಟಿ ಆಲಿಯಾ ಸಿದ್ದಕಿ ಆರೋಪ ಮಾಡಿದ್ದಾರೆ.

ಬಾಲಿವುಡ್​ನ ಖ್ಯಾತ ನಟ ನವಾಜುದ್ದೀನ್​ ಸಿದ್ಧಿಕಿ ಅವರ ಪತ್ನಿಯೇ ಆಲಿಯಾ ಸಿದ್ಧಿಕಿ.
ಇವರಿಬ್ಬರ ನಡುವೆ ಜಗಳ, ಮನಸ್ತಾಪ ಇದೆ ಮತ್ತು ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರೆ. ತಮ್ಮ ನಿಜವಾದ ವ್ಯಕ್ತಿತ್ವ ಎಂಥದ್ದು ಅನ್ನೋದನ್ನ ಜನರಿಗೆ ತಿಳಿಸುವ ಸಲುವಾಗಿ ಆಲಿಯಾ ಸಿದ್ಧಿಕಿ ಅವರು ಬಿಗ್​ ಬಾಸ್​ಗೆ ಹೋಗಿದ್ದರು. ಆದರೆ ಎರಡನೇ ವಾರದಲ್ಲೇ ಅವರನ್ನು ಎಲಿಮಿನೇಟ್​ ಮಾಡಲಾಯಿತು. ಇದು ಆಲಿಯಾಗೆ ಸಖತ್​ ಬೇಜಾರಾಗಿದೆ.

ಆಲಿಯಾ ಸಿದ್ಧಿಕಿ ಅವರು ತಮ್ಮ ಜೀವನದ ಘಟನೆಗಳ ಬಗ್ಗೆ ‘ಬಿಗ್​ ಬಾಸ್​ ಒಟಿಟಿ’ ಶೋನಲ್ಲಿ ಮಾತನಾಡಲು ಆರಂಭಿಸಿದರು. ಆ ಮಾತುಕಥೆ ಮುಂದುವರಿದಿದ್ದರೆ ಹಲವು ಸತ್ಯಗಳು ಹೊರಬರುತ್ತಿದ್ದವು. ಅಷ್ಟರಲ್ಲಾಗಲೇ ಅವರನ್ನು ಎಲಿಮಿನೇಟ್​ ಮಾಡಿ ಹೊರಗೆ ಕಳಿಸಲಾಗಿದೆ. ಇದರ ಹಿಂದೆ ಸಲ್ಮಾನ್​ ಖಾನ್​ ಅವರ ಪಕ್ಷಪಾತ ಇದೆ ಅನ್ನೋದು ಆಲಿಯಾ ಆರೋಪ. ‘ಸಲ್ಮಾನ್​ ಖಾನ್​ ಒಬ್ಬ ಸ್ಟಾರ್​ ನಟನಾಗಿದ್ದು ತಮಗೆ ಆಪ್ತವಾಗಿರುವ ಸ್ಟಾರ್​ಗಳನ್ನು ಅವರು ಬೆಂಬಲಿಸುತ್ತಾರೆ’ ಅಂತ ಆಲಿಯಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply