NCERT ಪಠ್ಯಪುಸ್ತಕಗಳಲ್ಲಿ ಇನ್ಮುಂದೆ India ಬದಲು ‘ಭಾರತ್‌’ ಪದ ಬಳಕೆ? ಕಮಿಟಿ ಹೇಳಿದ್ದೇನು?

masthmagaa.com:

ಇತಿಹಾಸಕಾರ ಸಿ. ಐ. ಐಸಾಕ್‌ ನೇತೃತ್ವದ ಕಮಿಟಿ NCERT ಪಠ್ಯಪುಸ್ತಕಗಳಲ್ಲಿ India ಬದಲು ಭಾರತ್‌ ಪದ ಬಳಸಲು ಶಿಫಾರಸ್ಸು ಮಾಡಿದೆ ಅಂತ ತಿಳಿದುಬಂದಿದೆ. ಅದರ ಜೊತೆಗೆ ಇತಿಹಾಸದಲ್ಲಿ ಪ್ರಾಚೀನ ಇತಿಹಾಸ ಬದಲು ಶಾಸ್ತ್ರೀಯ ಇತಿಹಾಸ (classical history)ವನ್ನ ಸೇರಿಸೋ ಪ್ರಪೋಸಲ್‌ ನೀಡಿದೆ. ಈ ಕುರಿತು ಮಾತನಾಡಿರೋ ಪ್ರೊಫೆಸರ್‌ ಸಿ. ಐ. ಐಸಾಕ್‌ “ಭಾರತ್‌ ಅನ್ನೋ ಪದಕ್ಕೆ 7 ಸಾವಿರ ವರ್ಷದ ವಿಷ್ಣು ಪುರಾಣದ ಹಿನ್ನೆಲೆಯಿದೆ. India ಅನ್ನುವ ಹೆಸರು 1757ರ ಪ್ಲಾಸಿ ಕದನದ ಈಚೆಗೆ ಈಸ್ಟ್‌ ಇಂಡಿಯಾ ಕಂಪೆನಿಯಿಂದ ಬಂದಿದೆ. ಆದ್ರಿಂದ ಭಾರತ್‌ ಅನ್ನೋ ಹೆಸರನ್ನ ಶಿಫಾರಸ್ಸು ಮಾಡಿದ್ದೇವೆ. ಇನ್ನು ಬ್ರಿಟಿಷರು ಭಾರತದ ಇತಿಹಾಸವನ್ನ ಪ್ರಾಚೀನ, ಮಧ್ಯಕಾಲೀನ, ಆದುನಿಕ ಇತಿಹಾಸಗಳು ಅಂತ ಡಿವೈಡ್‌ ಮಾಡಿದ್ದಾರೆ. ಪ್ರಾಚೀನ ಇತಿಹಾಸದಲ್ಲಿ ಭಾರತವನ್ನು ಅಭಿವೃದ್ಧಿ, ವೈಜ್ಞಾನಿಕ ಜ್ಞಾನವಿಲ್ಲದ ಕತ್ತಲು ಕವಿದ ದೇಶ ಅಂತ ಬಿಂಬಿಸಲಾಗಿದೆ. ಆದ್ರೆ ನಮ್ಮ ದೇಶದ ಜ್ಞಾನ ಆರ್ಯಭಟನ ಸೌರಮಂಡಲದ ಅಧ್ಯಯನದಷ್ಟು ಹಿಂದಿನದು. ಆದ್ರಿಂದ ಪ್ರಾಚೀನ ಇತಿಹಾಸವನ್ನ ಶಾಸ್ತ್ರೀಯ ಇತಿಹಾಸ ಅಂತ ಬದಲಾಯಿಸುವ ಅಗತ್ಯ ಇದೆ” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply