ಇ-ಫೈಲಿಂಗ್ ಪೋರ್ಟಲ್ ಸಮಸ್ಯೆ ಪರಿಹರಿಸಲು ಇನ್ಫೋಸಿಸ್​​ಗೆ ಸೆ.15ರವರೆಗೆ ಟೈಂ!

masthmagaa.com:

ಆದಾಯ ತೆರಿಗೆ ಇಲಾಖೆಯ ಹೊಸ ಇ ಫೈಲಿಂಗ್ ವೆಬ್​ಪೋರ್ಟಲ್ ಸಮಸ್ಯೆ ಪರಿಹರಿಸಲು ಇನ್ಫೋಸಿಸ್​ಗೆ ಸೆಪ್ಟೆಂಬರ್ 15ರವರೆಗೆ ಟೈಂ ನೀಡಲಾಗಿದೆ. ಜೂನ್ 7ರಂದು ಇನ್ಫೋಸಿಸ್ ಸಂಸ್ಥೆ ಆದಾಯ ತೆರಿಗೆ ಇಲಾಖೆಗೆ ಈ ವೆಬ್​ಪೋರ್ಟಲ್ ರೆಡಿ ಮಾಡಿಕೊಟ್ಟಿತ್ತು. ಮರುದಿನವೇ ಅದ್ರಲ್ಲಿ ತೊಂದ್ರೆ ಶುರುವಾಗಿತ್ತು. ಆದ್ರೆ ಇನ್ಫೋಸಿಸ್ ಇನ್ನೂ ಕೂಡ ಅದ್ನ ಸರಿಪಡಿಸಿಲ್ಲ. ಹೀಗಾಗಿ ನಿನ್ನೆ ಇನ್ಫೋಸಿಸ್ ಸಿಇಒ ಸಲೀಲ್ ಪಾರೆಕ್​​ಗೆ ನೋಟಿಸ್ ನೀಡಿ, ಇವತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗಿ ತೊಂದ್ರೆಗೆ ಕಾರಣವೇನು ಅಂತ ವಿವರಿಸಲು ಸೂಚಿಸಲಾಗಿತ್ತು. ಅದರಂತೆ ಸಲೀಲ್ ಪಾರೆಕ್ ಇವತ್ತು ಭೇಟಿ ನೀಡಿ ವಿವರಿಸಿದ್ರು.

-masthmagaa.com

Contact Us for Advertisement

Leave a Reply