ವಿಮಾನದ ಆಹಾರದಲ್ಲಿ ಮೊಟ್ಟೆ ಓಡು, ಕೊಳೆತ ಆಲೂ..!

ಏರ್ ಇಂಡಿಯಾ ವಿಮಾನದಲ್ಲಿ ಆಮ್ಲೆಟ್‍ನಲ್ಲಿ ಮೊಟ್ಟೆಯ ಸಿಪ್ಪೆ ಪತ್ತೆಯಾಗಿದೆ. ಮಹಾರಾಷ್ಟ್ರದ ಎನ್‍ಸಿಪಿ ನಾಯಕಿ ವಂದನಾ ಚೌವ್ಹಾನ್ ಪುಣೆಯಿಂದ ದೆಹಲಿಗೆ ಹೊರಟಿದ್ದರು. ಈ ವೇಳೆ ತಾವು ಆರ್ಡರ್ ಮಾಡಿದ್ದ ಆಮ್ಲೆಟ್‍ನಲ್ಲಿ ಮೊಟ್ಟೆಯ ಸಿಪ್ಪೆ ಪತ್ತೆಯಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದ ವಂದನಾ, ನಾನು ಪುಣೆಯಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಬ್ರೇಕ್ ಫಾಸ್ಟ್‍ಗಾಗಿ ಆಮ್ಲೆಟ್ ಆರ್ಡರ್ ಮಾಡಿದ್ದೆ. ಆದ್ರೆ 2-3 ಸ್ಪೂನ್ ತಿನ್ನುವಾಗ ನನಗೆ ಆಮ್ಲೆಟ್‍ನಲ್ಲಿ ಸಿಪ್ಪೆ ಸಿಕ್ಕಿದೆ. ಅಲ್ಲದೆ ಆಲೂಗಡ್ಡೆ ಕೊಳೆತುಹೋಗಿದ್ದು, ಬೀನ್ಸ್ ಸರಿಯಾಗಿ ಬೆಂದಿಲ್ಲ. ಜಾಮ್‍ನ ಬಾಕ್ಸ್ ಮೇಲೆ ಏನೋ ಪೌಡರ್ ಇದೆ. ಈ ಬಗ್ಗೆ ಏರ್ ಇಂಡಿಯಾ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದರು. ಅಲ್ಲದೆ ಕೆಲವೊಂದು ಫೋಟೋಸ್ ಕೂಡ ಶೇರ್ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ವಿಮಾನದಲ್ಲಿ ಈ ರೀತಿ ಆಹಾರ ಪೂರೈಸಿದ ಕ್ಯಾಟರಿಂಗ್ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗಿದೆ. ಈ ಟ್ರಿಪ್‍ನ ಇಡೀ ವಿಮಾನದ ಆಹಾರದ ವೆಚ್ಚವನ್ನು ಅವರಿಂದಲೇ ಭರಿಸುವಂತೆ ಸೂಚಿಸಲಾಗಿದೆ. ಈ ಮೂಲಕ ಕ್ಯಾಟರಿಂಗ್ ಕಡೆಯಿಂದಾದ ತಪ್ಪಿಗೆ ದಂಡ ವಿಧಿಸಿದ್ದೇವೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ತಿಳಿಸಿದೆ.

Contact Us for Advertisement

Leave a Reply