ಪಾಕ್‌ನಲ್ಲಿ ಮಾರಿಗುಡಿ ದ್ವಂಸ: 150 ವರ್ಷದ ದೇಗುಲ ಕೆಡವಿದ ಬುಲ್ಡೋಜರ್

masthmagaa.com:

ಪಾಕಿಸ್ತಾನದ ಕರಾಚಿಯ ಸೋಲ್ಜರ್ ಬಜಾರ್‌ನಲ್ಲಿದ್ದ 150ಕ್ಕೂ ಹೆಚ್ಚು ವರ್ಷ ಹಳೆಯ ಹಿಂದೂ ಮಾರಿ ಮಾತಾ ದೇವಸ್ಥಾನವನ್ನು ಬುಲ್ಡೋಜರ್‌ ಬಳಸಿ ನೆಲಸಮಗೊಳಿಸಲಾಗಿದೆ. ದೇವಸ್ಥಾನ ತುಂಬಾ ಹಳೆಯದಗಾಗಿದ್ದು, ಗೋಡೆಗಳು ಶಿಥಿಲಗೊಂಡಿದ್ರಿಂದ ಡೇಂಜರಸ್‌ ಸ್ಟಕ್ಚರ್‌ ಅಂತ ಘೋಷಿಸಲಾಗಿದೆ. ಈ ದೇವಾಲಯವನ್ನ ಮದ್ರಾಸ್‌ ಹಿಂದೂ ಸಮುದಾಯ ನಡೆಸುತ್ತಿದ್ದು, ಅವರು ಕೂಡ ಈ ದೇವಸ್ಥಾನ ಹಳೆಯ ಹಾಗೂ ಅಪಾಯಕಾರಿ ರಚನೆಯನ್ನ ಹೊಂದಿದೆ ಅಂತ ಒಪ್ಪಿಕೊಂಡಿದ್ದಾರೆ. ಹೀಗಾಗಿ ದೇವಸ್ಥಾನವನ್ನ ಕೆಡವಲಾಗಿದ್ದು, ತಾತ್ಕಲಿಕವಾಗಿ ಸ್ಥಳಾಂತರ ಮಾಡಲಾಗಿದೆ ಹಾಗೂ ನವೀಕರಿಸುವ ಸಾಧ್ಯತೆಯಿದೆ ಅಂತ ಪೊಲೀಸರು ಹೇಳಿದ್ದಾರೆ. ಆದ್ರೆ ಸ್ಥಳೀಯ ಹಿಂದು ಸಮುದಾಯ ಮಾತ್ರ, ದೇವಸ್ಥಾನದ ಆಡಳಿತ ಮಂಡಳಿ ನಕಲಿ ದಾಖಲೆಪತ್ರ ತಯಾರಿಸಿ ದೇವಸ್ಥಾನದ ಸ್ಥಳವನ್ನ ಮಾರಾಟ ಮಾಡಿದ್ದಾರೆ. ಈ ಹಿಂದೆ ಜಾಗ ಖಾಲಿ ಮಾಡುವಂತೆ ಒತ್ತಡ ಹೇರಲಾಗಿತ್ತು. ಈಗ ನೋಡಿದ್ರೆ ಈ ಸ್ಥಳದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡೋ ಉದ್ಧೇಶದಿಂದ ಬೆಳಗಿನ ಜಾವ ಬಂದು ಯಾರಿಗೂ ತಿಳಿಸದೆ ದೇವಾಲಯವನ್ನ ಕೆಡವಲಾಗಿದೆ ಅಂತ ಆರೋಪಿಸಿದ್ದಾರೆ. ಇನ್ನೊಂದ್‌ ಕಡೆ ಡಕಾಯಿತರ ಗುಂಪೊಂದು ಹಿಂದೂ ದೇವಾಲಯದ ಮೇಲೆ ರಾಕೆಟ್‌ ಲಾಂಚರ್‌ ಬಳಸಿ ದಾಳಿ ಮಾಡಿರುವ ಘಟನೆ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ನಡೆದಿದೆ. ಸ್ಥಳೀಯ ಹಿಂದೂ ಸಮುದಾಯದವರು ನಿರ್ಮಿಸಿದ ದೇವಾಲಯದ ಮೇಲೆ ದಾಳಿಕೋರರು ಮನಬಂದಂತೆ ಗುಂಡು ಹಾರಿಸಿದ್ದಾರೆ. ಆದ್ರೆ ದಾಳಿ ವೇಳೆ ದೇವಾಲಯದ ಬಾಗಿಲು ಮುಚ್ಚಿತ್ತು ಹಾಗೂ ದಾಳಿಕೋರರು ಹಾರಿಸಿದ್ದ ರಾಕೆಟ್‌ ಸ್ಫೋಟಗೊಳ್ಳದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ. ಜೊತೆಗೆ ದಾಳಿ ನಡೆದ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗ್ತಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply