ಫೀಲ್ಡ್ ಆಸ್ಪತ್ರೆಗಳನ್ನು ಸ್ಥಾಪಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

masthmagaa.com:

ಮೇ 1ರಿಂದ ದೇಶದಲ್ಲಿ ಮತ್ತೊಂದು ಹಂತದ ಲಸಿಕೆ ಅಭಿಯಾನ ಶರುವಾಗಲಿದ್ದು, ಇದ್ರಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತೆ. ಈ ನಡುವೆ ಹಲವು ಫೀಲ್ಡ್ ಆಸ್ಪತ್ರೆಗಳ ಅಗತ್ಯತೆ ಇದೆ. ನಮ್ಮ ಮತ್ತು ಖಾಸಗಿ ವಲಯದ ನೆರವಿನೊಂದಿಗೆ ಈ ಕಾರ್ಯವನ್ನು ರಾಜ್ಯ ಸರ್ಕಾರಗಳೇ ಮಾಡಬೇಕು ಅಂತ ಕೇಂದ್ರ ಸರ್ಕಾರ ಸೂಚಿಸಿದೆ. ಅದಕ್ಕಾಗಿ ಡಿಆರ್​ಡಿಒ ಅಂದ್ರೆ ಡಿಫೆನ್ಸ್ ರಿಸರ್ಚ್​​​​ & ಡೆವೆಲಪ್​ಮೆಂಟ್ ಆರ್ಗನೈಸೇಷನ್, ಸಿಎಸ್​​ಐಆರ್ ಅಂದ್ರೆ ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ಏಜೆನ್ಸಿಗಳ ಸೇರಿದಂತೆ ಇಂಥಹ ಸರ್ಕಾರಿ ಸಂಸ್ಥೆಗಳ ಸಹಾಯವನ್ನು ಪಡೆದುಕೊಳ್ಳಿ ಅಂತ ಹೇಳಿದೆ. ಫೀಲ್ಡ್​ ಹಾಸ್ಪಿಟಲ್ ಅಂದ್ರೆ ತಾತ್ಕಾಲಿಕ ಆಸ್ಪತ್ರೆಗಳು, ಅಥವಾ ಮೊಬೈಲ್ ಮೆಡಿಕಲ್ ಯುನಿಟ್.. ಅಂದ್ರೆ ಲಸಿಕೆ ಕೇಂದ್ರಗಳ ಸಂಖ್ಯೆಯನ್ನು ಜಾಸ್ತಿ ಮಾಡಿ, ಲಸಿಕೆ ಅಭಿಯಾನವನ್ನು ಮುನ್ನಡೆಸಲು ಕೇಂದ್ರ ಸರ್ಕಾರ ಈ ಕರೆ ನೀಡಿದೆ.

-masthmagaa.com

Contact Us for Advertisement

Leave a Reply