ಸೂಜಿಯೇ ಚುಚ್ಚದೆ ‘ಪ್ಯಾಚ್’ ಮೂಲಕ ಲಸಿಕೆ ಹಾಕ್ತಾರಂತೆ! ಹೇಗೆ ಗೊತ್ತಾ?

masthmagaa.com:

ಕೊರೋನ ಲಸಿಕೆಯನ್ನ ನಾವು ನೀವೆಲ್ಲ ಇಂಜಕ್ಷನ್ ಮೂಲಕ ಹಾಕಿಸಿಕೊಂಡಿದ್ದೀವಿ. ಸೂಜಿಯನ್ನ ಒಳಗೆ ಚುಚ್ತಾರೆ. ಆದ್ರೆ ಸೂಜಿಯೇ ಚುಚ್ಚದೆ ಲಸಿಕೆ ಹಾಕೋಕೆ ಆದ್ರೆ ಹೇಗಿರುತ್ತೆ? ಅದು ಬಿಡ್ರಿ. ಹಳೇ ಸುದ್ದಿ. ಝೈಡ್ ಕ್ಯಾಡಿಲಾದವ್ರು ಇಜೆಂಕ್ಟರ್ ಗಳ ಮೂಲಕ ಸೂಜಿ ಚುಚ್ಚದೇನೆ ಕೊಡೋ ಲಸಿಕೆ ತರ್ತಿದ್ದಾರೆ ಅಂತೀರಾ? ಅದಕ್ಕೂ ಲೇಟೆಸ್ಟ್ ಸುದ್ದಿ ನಮ್ ಹತ್ರ ಇದೆ. ಇಲ್ಲಿ ಇಜೆಂಕ್ಟರ್ ಮೂಲಕ ಲಸಿಕೆಯನ್ನ ವೇಗವಾಗಿ ಜೆಟ್ ಥರ ಹಾರಿಸಿನೂ ಕೊಡಲ್ಲ. ಬದಲಿಗೆ ಜಸ್ಟ್ ಒಂದು ಪ್ಯಾಚ್ ಥರ ನಿಮ್ಮ ಸ್ಕಿನ್ ಗೆ ಅಂಟಿಸ್ತಾರೆ ಅಷ್ಟೆ. ಕೊರೋನ ಬಂದಾಗಿನಿಂದ ಇಂಥಾ ಒಂದು ಟೆಕ್ನಾಲಜಿ ಡೆವಲಪ್ ಮಾಡೋಕೆ ವಿಜ್ಞಾನಿಗಳು ಟ್ರೈ ಮಾಡ್ತಾನೆ ಇದ್ರು. ಈಗ ಇದು ಸಾಕಷ್ಟು ಡೆವಲಪ್ ಆಗಿದೆ. ಅಮೆರಿಕ ಹಾಗೂ ಆಸ್ಟ್ರೇಲಿಯನ್ ಟೀಮ್ ಗಳು ಸೇರಿಕೊಂಡು ಈ ಸಂಶೋಧನೆ ಮಾಡಿವೆ. ಒಂದು ಸ್ಕ್ವೇರ್ ಸೆಂಟಿಮೀಟರ್ / ಒಂದು ಚದರ ಸೆಂಟಿಮೀಟರ್ ಸೈಝಿನ ಪ್ಯಾಚ್ ಇದು. ಹೆಚ್ಚಂದ್ರೆ ಒಂದು ಸಣ್ಣ ಸ್ಟಾಂಪ್ ಸೈಝು ಅನ್ಕೊಳಿ. ಇದರಲ್ಲಿ 5 ಸಾವಿರಕ್ಕೂ ಅಧಿಕ ಸೂಕ್ಷ್ಮ ಪಿನ್ ನಂತಹ ರಚನೆ ಇರುತ್ತೆ. ಇದು ಬರಿಗಣ್ಣಿಗೆ ಕಾಣದಷ್ಟು ಸೂಕ್ಷ್ಮ ಪಿನ್ ಗಳು. ಒಂದು ಸ್ಟಾಂಪ್ ಸೈಜಿನ ಪ್ಯಾಚಲ್ಲೇ ಇಂಥದ್ದು 5 ಸಾವಿರ ಇರ್ತಾವಂದ್ರೆ ಎಷ್ಟು ಸಣ್ಣ ಅಂತ ಅರ್ಥ ಮಾಡ್ಕೊಳಿ. ಈ ಸೂಕ್ಷ್ಮ ಪಿನ್ಗಳಿಗೆ ವ್ಯಾಕ್ಸಿನ್ ಕೋಟ್ ಮಾಡಲಾಗಿರುತ್ತೆ. ಇದನ್ನ ಜಸ್ಟ್ ಚರ್ಮದ ಮೇಲೆ ಅಂಟಿಸಿಕೊಂಡ್ರೆ ಆಯ್ತು. ಸಿರಿಂಜ್ಗಿಂತಲೂ ಪರಿಣಾಮಕಾರಿಯಾಗಿ ವ್ಯಾಕ್ಸನ್ ದೇಹ ಸೇರುತ್ತೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಇಲಿಗಳ ಮೇಲೆ ಇದರ ಪ್ರಯೋಗ ನಡೆದಿದೆ. ಯಶಸ್ವಿ ಕೂಡ ಆಗಿದೆ ಅಂತ ಟೀಮ್ ಹೇಳಿದೆ. ಇದು ಎಲ್ಲ ಅಪ್ರೂವಲ್ ಪಡೆದುಕೊಂಡು ಮಾನವ ಬಳಕೆಗೂ ಬಂದರೆ ವ್ಯಾಕ್ಸಿನ್ ಹಾಗೂ ಮೆಡಿಸಿನ್ ಕ್ಷೇತ್ರದಲ್ಲಿ ಕ್ರಾಂತಿಯೇ ಆಗುತ್ತೆ ಅಂತ ಅಂದಾಜುಮಾಡಲಾಗಿದೆ. ಇದನ್ನ ಎಲ್ಲಾ ವ್ಯಾಕ್ಸಿನ್ ಗಳಿಗೂ ಬಳಸಬಹುದು. ಸೂಜಿಯ ಭಯ ಇಲ್ಲ, ಪೇನ್ ಇಲ್ಲ, ಮಕ್ಕಳು ಅಳಲ್ಲ. ಇದನ್ನ ಹಾಕಲು ತರಬೇತಿ ಪಡೆದ ನರ್ಸೇ ಬೇಕು ಅಂತಿಲ್ಲ. ಸಾಗಾಟ ಹಾಗೂ ಸ್ಟೋರೇಜ್ ಕೂಡ ಮಾಮೂಲಿ ವ್ಯಾಕ್ಸಿನ್ ಗಿಂತ ಈಸಿ ಅಂತ ಹೇಳ್ತಿದ್ದಾರೆ.

-masthmagaa.com

Contact Us for Advertisement

Leave a Reply