ನೇಪಾಳದಲ್ಲಿ ಮೊದಲ ಕಾನೂನು ಬದ್ಧ ಸಲಿಂಗಿ ವಿವಾಹ!

masthmagaa.com:

ಪಶ್ಚಿಮ ನೇಪಾಳದ ದೊರ್ಡಿಯಲ್ಲಿ ಮೊದಲ ಸಲಿಂಗಿ ವಿವಾಹವನ್ನ ಕಾನೂನಿನ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ. ಈ ಮೂಲಕ ಸೌತ್‌ ಏಷ್ಯಾದಲ್ಲೇ ಕಾನೂನುಬದ್ಧಗೊಂಡ ಮೊದಲ ಸಲಿಂಗಿ ಮದುವೆ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ಅಲ್ದೆ ನೇಪಾಳ ಸೇಮ್‌ ಸೆಕ್ಸ್‌ ಮ್ಯಾರೀಜ್‌ನ್ನ ಲೀಗಲೈಸ್‌ ಮಾಡಿದ ದಕ್ಷಿಣ ಏಷ್ಯಾದ ಮೊದಲ ದೇಶವೆನಿಸಿದೆ. ಅಂದಹಾಗೆ ಜೂನ್‌ 27ರಂದು ನೇಪಾಳ ಹಲವರು ಸಲ್ಲಿಸಿದ್ದ ರಿಟ್‌ ಅರ್ಜಿಯಲ್ಲಿ ನೇಪಾಳದಲ್ಲಿ ಸಲಿಂಗಿಗಳ ವಿವಾಹವನ್ನ ಕಾನೂನು ಬದ್ದಗೊಳಿಸಲು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. .

-masthmagaa.com

Contact Us for Advertisement

Leave a Reply