ಇಸ್ರೇಲ್​​ನಲ್ಲಿ ಹೊಸ ಮಾದರಿಯ ಮನುಷ್ಯನ ಅವಶೇಷ ಪತ್ತೆ!

masthmagaa.com:

ವಿಜ್ಞಾನ ಬೆಳೆದಂತೆ ದಿನಕ್ಕೊಂದು ಸಂಶೋಧನೆ ನಡೀತಾನೇ ಇರುತ್ತೆ. ಅದೇ ರೀತಿ ಈಗ ಇಸ್ರೇಲಿ ಸಂಶೋಧಕರು ಆರಂಭಿಕ ಹಂತದ ಮಾನವನ ಹೊಸ ಮಾದರಿಯ ಮೂಳೆಗಳನ್ನು ಪತ್ತೆಹಚ್ಚಿದ್ದಾರೆ. ತಲೆ ಬರುಡೆಯ ಒಂದು ಭಾಗ ಮತ್ತು ದವಡೆಯ ಭಾಗ ಪತ್ತೆಯಾಗಿದೆ. ಈಗ ವಿಜ್ಞಾನದಲ್ಲಿ ನಾವು ಆರಂಭಿಕ ಮಾನವ ಅಂತ ಯಾವುದನ್ನ ನಂಬ್ತೀವೋ ಅವೆಲ್ಲಕ್ಕಿಂತಲೂ ವಿಚಿತ್ರವಾಗಿರೋ ಮೂಳೆಗಳನ್ನು ಇಸ್ರೇಲಿ ಸಂಶೋಧಕರು ಪತ್ತೆಹಚ್ಚಿದ್ದಾರೆ. ಇಸ್ರೇಲ್​​ನ ರಾಮ್ಲಾ ನಗರದ ಬಳಿ ಪುರಾತತ್ವ ತಜ್ಞರ ಉತ್ಪನನದ ವೇಳೆ ಈ ಅವಶೇಷಗಳು ಪತ್ತೆಯಾಗಿವೆ. ಇವುಗಳು ಹೋಮೋ ಸೆಫೆಯನ್ಸ್​ನಿಂದ ಹಿಡಿದು, ಹೋಮೋ ಕುಲದ ಯಾವುದೇ ಪ್ರಭೇದಗಳಿಗೂ ಹೋಲಿಕೆಯಾಗ್ತಿಲ್ಲ. ಹೀಗಾಗಿ ಮಾನವ ವಿಕಾಸ ಕುರಿತ ವಿಜ್ಞಾನದ ಮೇಲೆ ಮತ್ತಷ್ಟು ಬೆಳಕು ಚೆಲ್ಲೋ ಸಾಧ್ಯತೆ ಇದೆ. ಇದು 1.40 ಲಕ್ಷದಿಂದ 1.20 ಲಕ್ಷ ವರ್ಷಗಳಷ್ಟು ಹಳೆಯದಾಗಿದ್ದು, ನಿಯಾಂಡರ್ತಲ್​ ಮತ್ತು ಆರ್ಚಯೆಕ್ ಹೋಮೋ ಪ್ರಭೇದದ ಕೆಲವೊಂದು ಲಕ್ಷಣಗಳನ್ನು ಹೊಂದಿವೆ. ಆದ್ರೂ ಕೂಡ ಇದ್ರ ತಲೆಬುರುಡೆ ರಚನೆ ತುಂಬಾ ಡಿಫ್ರೆಂಟ್ ಆಗಿದೆ. ಇದ್ರ ಬುರುಡೆ ಗಲ್ಲ ಸಣ್ಣ ಪ್ರಮಾಣದಲ್ಲಿ ಇದೆ. ದೊಡ್ಡ ಹಲ್ಲುಗಳನ್ನು ಹೊಂದಿದೆ. ಯುನಿವರ್ಸಿಟಿ ಆಫ್ ಟೆಲ್ ಅವಿವ್​​ನ ಜರ್ನಲ್​​ನಲ್ಲಿ ಈ ಬಗ್ಗೆ ವರದಿ ಪ್ರಕಟಿಸಲಾಗಿದ್ದು, ಸಂಶೋಧಕರು ಇದಕ್ಕೆ ನೇಶರ್ ರಮ್ಲಾ ಹೋಮೋ ಟೈಪ್ ಅಂತ ಹೆಸರಿಟ್ಟಿದ್ದಾರೆ. ನೇಶರ್ ಅಂದ್ರೆ ಇಸ್ರೇಲ್ ಪ್ರಮುಖ ವಾಣಿಜ್ಯ ನಗರಿ ಟೆಲ್ ಅವೀವ್ ಅಂತ ಅರ್ಥ.. ರಮ್ಲಾ ಅಂದ್ರೂ ಕೂಡ ಒಂದು ಸಿಟಿ ಹೆಸರು.. ಉತ್ಖನನ ವೇಳೆ ಮಾನವನ ಅವಶೇಷದ ಜೊತೆಗೆ ಹಲವು ಪ್ರಾಣಿಗಳ ಮೂಳೆ ಮತ್ತು ಕಲ್ಲಿನ ಆಯುಧಗಳು ಕೂಡ ಪತ್ತೆಯಾಗಿವೆ. ಅಂದಹಾಗೆ ಈವರೆಗೆ ಒಟ್ಟು 21 ಮಾನವ ಪ್ರಭೇದಗಳನ್ನು ಪತ್ತೆ ಹಚ್ಚಲಾಗಿದೆ.

-masthmagaa.com

Contact Us for Advertisement

Leave a Reply