ಎಳೆ ಮಕ್ಕಳ ಆಹಾರ ಉತ್ಪನ್ನಗಳಿಗೆ ‘ನೆಸ್ಲೆ’ ಹೆಚ್ಚು ಸಕ್ಕರೆ ಸೇರಿಸ್ತಿದೆ!

masthmagaa.com:

ಮ್ಯಾಗಿ, ಕಿಟ್‌ಕ್ಯಾಟ್‌, ಮಂಚ್‌, ಮಿಲ್ಕಿಬಾರ್‌, ಸೆರೆಲ್ಯಾಕ್‌ ಹೀಗೆ ಖ್ಯಾತನಾಮ ಉತ್ಪನ್ನಗಳನ್ನ ತಯಾರಿಸೋ ವಿಶ್ವದ ಬಹುದೊಡ್ಡ ಆಹಾರೋದ್ಯಮ ಕಂಪನಿ ನೆಸ್ಟ್ಲೆ ಮೇಲೆ ಈಗ ದೊಡ್ಡ ಆರೋಪ ಕೇಳಿಬಂದಿದೆ. ನೆಸ್ಟ್ಲೆ ಯುರೋಪ್‌ಗೆ ಹೋಲಿಸಿದ್ರೆ, ದಕ್ಷಿಣ ಏಷ್ಯಾ, ಆಫ್ರಿಕಾ, ಲ್ಯಾಟಿನ್‌ ಅಮೇರಿಕದಂತಹ ಬಡರಾಷ್ಟ್ರಗಳ ಮಕ್ಕಳ ಉತ್ಪನ್ನಗಳಲ್ಲಿ ಹೆಚ್ಚು ಶುಗರ್‌ನ್ನ ಆಡ್‌ ಮಾಡುತ್ತೆ ಅಂತ ಸ್ವಿಜರ್ಲೆಂಡ್‌ನ ಸಂಸ್ಥೆಯೊಂದು ಆರೋಪಿಸಿದೆ. ಇದ್ರಲ್ಲಿ ಭಾರತ ಕೂಡ ಸೇರಿದೆ… ಎಳೆ ಮಕ್ಕಳಿಗೆ ತಯಾರಿಸೋ ಹಾಲು ಮತ್ತು ಸೆರೆಲಾಕ್‌ನಂತಹ ಸೀರಿಯಲ್‌ ಪ್ರಾಡಕ್ಟ್‌ಗಳಲ್ಲಿ ಸಕ್ಕರೆ ಮತ್ತು ಜೇನುತುಪ್ಪ ಆಡ್‌ ಮಾಡ್ತಿದೆ. ಈ ಮೂಲಕ ಒಬೆಸಿಟಿ ಮತ್ತು ದೀರ್ಘಕಾಲದ ಕಾಯಿಲೆಗಳನ್ನ ತಡೆಗಟ್ಟೋ ನಿಟ್ಟಿನಲ್ಲಿ ರೂಪಿಸಲಾಗಿರೋ ಅಂತಾರಾಷ್ಟ್ರೀಯ ಗೈಡ್‌ಲೈನ್ಸ್‌ನ್ನ ಉಲ್ಲಂಘಿಸಿದೆ. ಹೀಗಂತ ಕ್ಯಾಂಪೇನರ್ಸ್‌ ಫ್ರಮ್‌ ಪಬ್ಲಿಕ್‌ ಐ (Campaigner’s from Public Eye) ತನಿಖಾ ಸಂಸ್ಥೆ ಆರೋಪಿಸಿದೆ. ಉದಾಹರಣಗೆ ಯುಕೆಯಲ್ಲಿ ಮಾರಾಟ ಮಾಡೋ ಸೆರೆಲ್ಯಾಕ್‌ನಲ್ಲಿ ಒಂಚೂರು ಶುಗರ್‌ ಇರಲ್ಲ. ಆದ್ರೆ ಭಾರತದಲ್ಲಿ ಮಾತ್ರ ಒಂದು ಕಪ್‌ಗೆ 2.7 ಗ್ರಾಂನಷ್ಟು ಶುಗರ್‌ ಆಡ್‌ ಮಾಡುತ್ತೆ. 2022ರಲ್ಲಿ, ಈ ರೀತಿ ನೆಸ್ಲೆಯ 250 ಮಿಲಿಯನ್‌ ಡಾಲರ್‌ ಅಂದ್ರೆ 2.07 ಸಾವಿರ ಕೋಟಿ ರೂಪಾಯಿ ಮೌಲ್ಯದಷ್ಟು ಪ್ರಾಡಕ್ಟ್‌ಗಳು ಭಾರತಕ್ಕೆ ಮಾರಾಟ ಮಾಡಲಾಗಿದೆ. ಮಾರಾಟವಾಗಿರೋ ಈ ಎಲ್ಲಾ ಪ್ರಾಡಕ್ಟ್‌ಗಳಲ್ಲಿಯೂ, ಸರಾಸರಿ 1 ಕಪ್‌(25ಗ್ರಾಂ) ಸೀರಿಯಲ್‌ನಲ್ಲಿ ಸುಮಾರು 3 ಗ್ರಾಂನಷ್ಟು ಸಕ್ಕರೆ ಇದೆ ಅಂತ ಸ್ಟಡಿ ರಿವೀಲ್‌ ಮಾಡಿದೆ. WHO ಗೈಡ್‌ಲೈನ್‌ ಪ್ರಕಾರ 2 ವರ್ಷದ ಒಳಗಿನ ಮಕ್ಕಳಿಗೆ ಯಾವುದೇ ಆಡೆಡ್‌ ಶುಗರ್‌ ಕೊಡ್ಬಾರ್ದು. ಇಲ್ಲಾಂದ್ರೆ ಎಳೆವಯಸ್ಸಿನಲ್ಲೇ ಮಕ್ಕಳ ಈಟಿಂಗ್‌ ಹ್ಯಾಬಿಟ್‌ ಹೆಚ್ಚು ಸಕ್ಕರೆ ತಿನ್ನುವಂತೆ ಬದಲಾಗುತ್ತೆ. ಇದು ಮುಂದೆ ಡಯಾಬಿಟಿಸ್‌, ಒಬೆಸಿಟಿಯಂತಹ ದೀರ್ಘಾವಧಿಯ ಖಾಯಿಲೆಗೆ ಕಾರಣವಾಗುತ್ತೆ. ಆದ್ರು ಕೂಡ ನೆಸ್ಲೆ ನಿಯಮ ಉಲ್ಲಂಘಿಸ್ತಾ ಇದೆ ಅಂತ ಆರೋಪ ಮಾಡಲಾಗಿದೆ. ಇನ್ನು ಈ ಬಗ್ಗೆ ನೆಸ್ಲೆ ಇಂಡಿಯಾದ ವಕ್ತಾರ ರಿಯಾಕ್ಟ್‌ ಮಾಡಿದ್ದಾರೆ. ʻಎಳೆ ಮಕ್ಕಳಿಗೆ ತಯಾರಿಸಲಾಗೋ ಎಲ್ಲಾ ಪ್ರಾಡಕ್ಟ್‌ಗಳು ಗುಣಮಟ್ಟದ ಪೌಷ್ಟಿಕಾಂಶ ಹೊಂದಿದೆ. ಕಳೆದ 5 ವರ್ಷಗಳಿಂದ ನೆಸ್ಲೆ ಇಂಡಿಯಾ ಸುಮಾರು 30%ನಷ್ಟು ಸಕ್ಕರೆ ಅಂಶ ಕಡಿಮೆ ಮಾಡಿದೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply