ಫೇಸ್ಬುಕ್‌ ಬಿಜೆಪಿ ಪರ ಪಕ್ಷಪಾತ ಮಾಡ್ತಿದೆ: ಫೇಸ್ಬುಕ್‌ ಮಾಜಿ ಉದ್ಯೋಗಿ

masthmagaa.com:

ಫೇಸ್ಬುಕ್‌ನ ಭಾರತ ವಿಭಾಗ ಬಿಜೆಪಿಪರ ಪಕ್ಷಪಾತ ಮಾಡ್ತಾ ಇದೆ ಅಂತ ಫೇಸ್‌ಬುಕ್‌ನ ವಿಸಲ್‌ ಬ್ಲೋವರ್‌(Whistle Blower) ಒಬ್ರು ಆರೋಪಿಸಿದ್ದಾರೆ. ತಮ್ಮ ಸಂಸ್ಥೆಗೆ ಗೊತ್ತಿಲ್ಲದಂತೆ ಮಾಹಿತಿ ಲೀಕ್‌ ಮಾಡುವವರನ್ನ ವಿಸಲ್‌ ಬ್ಲೋವರ್‌ ಅಂತ ಕರೀತಾರೆ. ಈ ಹಿಂದೆ 2018 ರಿಂದ 2020ರವರೆಗೆ ಫೇಸ್ಬುಕ್‌ನಲ್ಲಿ ಡಾಟಾ ಸೈಂಟಿಸ್ಟ್‌ ಆಗಿದ್ದ ಸೋಫಿ ಝಾಂಗ್‌ ಅನ್ನೋವ್ರು ಈ ಆರೋಪ ಮಾಡಿದ್ದು ಜೊತೆಗೆ ಕೆಲವು ಆಂತರಿಕ ದಾಖಲೆಗಳನ್ನ ಕೂಡ ಬಿಡುಗಡೆ ಮಾಡಿದ್ದಾರೆ. ಉತ್ತರಪ್ರದೇಶದ ಬಿಜೆಪಿ ಸಂಸದರೊಬ್ರನ್ನ ಸಪೋರ್ಟ್‌ ಮಾಡೋಕೆ ಹಲವಾರು ಫೇಕ್‌ ಅಕೌಂಟ್‌ಗಳು ಕ್ರಿಯೇಟ್‌ ಆಗಿದ್ವು. ಇದನ್ನ ಫೇಸ್ಬುಕ್‌ ಪಬ್ಲಿಕ್‌ ಪಾಲಿಸಿ ಡೈರೆಕ್ಟರ್‌ ಶಿವಂಥ್‌ ತುರ್ಕಾಲ್‌ ಗಮನಕ್ಕೆ ತಂದ್ರು ಕೂಡ ಯಾವುದೇ ಕ್ರಮ ಕೈಗೊಂಡಿರ್ಲಿಲ್ಲ. ಆದ್ರೆ ಅದೇ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಮತ್ತು ದಿಲ್ಲಿಯಲ್ಲಿ ಆಪ್‌ನ ಫೇಕ್‌ ಅಕೌಂಟ್‌ ನೆಟ್‌ವರ್ಕ್‌ಗಳು ಕ್ರಿಯೇಟ್‌ ಆದಾಗ ತಕ್ಷಣವೇ ತೆಗೆದುಹಾಕುವಂತೆ ಆದೇಶ ಮಾಡಲಾಗಿತ್ತು ಅಂತ ಹೇಳಿದ್ದಾರೆ. ಅಂದ್ಹಾಗೆ ಕಳೆದ ತಿಂಗಳು ಫ್ರಾನ್ಸಸ್‌ ಹ್ಯೂಗನ್‌ ಅನ್ನೋ ಫೇಸ್ಬುಕ್‌ ಡೇಟಾ ಸೈಂಟಿಸ್ಟ್‌ ಕೂಡ ಇದೇ ರೀತಿ ಆರೋಪ ಮಾಡಿದ್ರು.

-masthmagaa.com

Contact Us for Advertisement

Leave a Reply