ಕರ್ನಾಟಕಕ್ಕೆ ಹೊಸ ರಾಜ್ಯಪಾಲರು…ಯಾರು ಗೊತ್ತಾ?

masthmagaa.com:

ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಅಂತ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ 8 ರಾಜ್ಯಗಳ ರಾಜ್ಯಪಾಲರನ್ನು ಬದಲಿಸಲಾಗಿದೆ. ಅದೇ ರೀತಿ ನಮ್ಮ ರಾಜ್ಯಕ್ಕೆ ಈಗಾಗಲೇ ಕೇಂದ್ರ ಸಚಿವರಾಗಿದ್ದ ತಾವರ್​ ಚಂದ್ ಗೆಹ್ಲೋಟ್ ಅವ್ರನ್ನು ನೇಮಿಸಲಾಗಿದೆ. ಈ ಮೂಲಕ ಸಚಿವ ಸಂಪುಟದಲ್ಲಿ ಒಂದು ಸ್ಥಾನ ಖಾಲಿಯಾದಂತಾಗಿದೆ. ಇವರು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಚಿವರಾಗಿದ್ರು. ಜೊತೆಗೆ ಬಿಜೆಪಿ ಕಡೆಯಿಂದ ರಾಜ್ಯಸಭೆ ಸಂಸದರಾಗಿಯೂ ಆಯ್ಕೆಯಾಗಿದ್ರು. ಇದೀಗ ಈ ಸ್ಥಾನಗಳಿಗೆ ರಾಜೀನಾಮೆ ನೀಡಿ ರಾಜ್ಯಪಾಲರಾಗಲಿದ್ದಾರೆ. ಇವರಿಗೂ ಮುನ್ನ 2014ರಲ್ಲಿ ರಾಜ್ಯಪಾಲರಾಗಿದ್ದ ಗುಜರಾತ್ ಮೂಲದ ವಜುಭಾಯಿ ರೂಢಾಬಾಯಿ ವಾಲಾ ಅಧಿಕವಾರಾವಧಿ 2019ರಲ್ಲೇ ಪೂರ್ಣಗೊಂಡಿತ್ತು. ಆದ್ರೆ ಹೊಸ ರಾಜ್ಯಪಾಲರನ್ನು ಆಯ್ಕೆ ಮಾಡಿರಲಿಲ್ಲ. ರಾಜ್ಯಪಾಲರ ಅಧಿಕಾರಾವಧಿ 5 ವರ್ಷವಾದ್ರೂ ನೇಮಕ ಮಾಡುವಾಗ ಮುಂದಿನ ಆದೇಶದವರೆಗೆ ಅಂತ ಉಲ್ಲೇಖಿಸಲಾಗುತ್ತೆ. ಹೀಗಾಗಿ ಹೆಚ್ಚಿನ ಅವಧಿಗೆ ಮುಂದುವರಿಯಲು ತೊಂದ್ರೆಯಾಗಲ್ಲ.. ನಾಡಿದ್ದು ಸೆಪ್ಟೆಂಬರ್ ಬಂದ್ರೆ ವಿಆರ್ ವಾಲಾ ರಾಜ್ಯಪಾಲರಾಗಿ 7 ವರ್ಷ ಫುಲ್ ಆಗ್ತಿತ್ತು. ಅದಕ್ಕೂ ಮುನ್ನವೇ ಅವರ ಜಾಗಕ್ಕೆ ಬೇರೆಯವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಹೊರತುಪಡಿಸಿ ಉಳಿದಂತೆ 7 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. ಯಾವ ರಾಜ್ಯಕ್ಕೆ ಯಾರನ್ನ ಗವರ್ನರ್ ಆಗಿ ನೇಮಿಸಲಾಗಿದೆ ಅಂತ ನೋಡೋದಾದ್ರೆ.
ಗೋವಾ- ಪಿಎಸ್ ಶ್ರೀಧರನ್ ಪಿಳ್ಳೈ
ಮಿಝೋರಾಂ-ಹರಿಬಾಬು ಕಂಭಂಪಟಿ
ತ್ರಿಪುರಾ- ಸತ್ಯದೇವ್ ನಾರಾಯಣ್ ಆರ್ಯ
ಹರಿಯಾಣ – ಭಂಡಾರು ದತ್ತಾತ್ರೇಯ
ಜಾರ್ಖಂಡ್- ರಮೇಶ್ ಬಾಯಿಸ್
ಮಧ್ಯಪ್ರದೇಶ- ಮಂಗುಭಾಯ್ ಛಂಗನ್​​ಭಾಯ್
ಹಿಮಾಚಲ ಪ್ರದೇಶ- ರಾಜೇಂದ್ರ ವಿಶ್ವನಾಥ್ ಆರ್ಲೇಕರ್​

-masthmagaa.com

Contact Us for Advertisement

Leave a Reply