masthmagaa.com:

ಜಿನೇವಾ: ಇಂಗ್ಲೆಂಡ್​​ನಲ್ಲಿ ಪತ್ತೆಯಾದ ಹೊಸ ಕೊರೋನಾ ವೈರಸ್ ನಿಯಂತ್ರಣ ತಪ್ಪಿಲ್ಲ.. ಸದ್ಯ ಇರುವ  ವ್ಯವಸ್ಥೆಗಳನ್ನೇ ಬಳಸಿಕೊಂಡು ಹೊಸ ಕೊರೋನಾವನ್ನೂ ನಿಯಂತ್ರಣಕ್ಕೆ ತರಬಹುದು ಅಂತ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಅತಿಹೆಚ್ಚು ಹರಡುವಿಕೆಯ ದರ ಹೊಂದಿರೋ ಹೊಸ ಕೊರೋನಾದ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿಯ ಮುಖ್ಯಸ್ಥ ಮೈಕಲ್ ರೆಯಾನ್​​, ನಾವು ಕೊರೋನಾದ ಸಮಯದಲ್ಲಿ ಇದಕ್ಕಿಂತಲೂ ಹೆಚ್ಚಿನ ಸಾಂಕ್ರಾಮಿಕ ದರವನ್ನು ಕಂಡಿದ್ದು, ನಿಯಂತ್ರಣ ಸಾಧಿಸಿದ್ದೇವೆ. ಹೀಗಾಗಿ ಹೊಸ ಕೊರೋನಾ ನಿಯಂತ್ರಣ ತಪ್ಪಿಲ್ಲ.. ಆದ್ರೂ ಕೂಡ ಅದನ್ನು ಹಾಗೆಯೇ ಬಿಡಲು ಸಾಧ್ಯವಿಲ್ಲ. ಕೊರೋನಾ ನಿಯಂತ್ರಣಕ್ಕೆ ಈಗ ಏನೆಲ್ಲಾ ಕ್ರಮಗಳನ್ನು ಅನುಸರಿಸುತ್ತಿದ್ದೇವೋ ಅದನ್ನೇ ಮತ್ತಷ್ಟು ಕಟ್ಟುನಿಟ್ಟಾಗಿ ಪಾಲಿಸಿದ್ರೆ ಆಯ್ತು ಅಂತ ಹೇಳಿದ್ದಾರೆ.

ಇದಕ್ಕೂ ಮುನ್ನ ಇಂಗ್ಲೆಂಡ್​ ಆರೋಗ್ಯ ಸಚಿವ ಮ್ಯಾಟ್  ಹ್ಯಾನ್​ಕಾಕ್​​​​​​​​, ಈ ಕೊರೋನಾದ ಹೊಸ ಪ್ರಬೇಧ ನಿಯಂತ್ರಣ ತಪ್ಪಿದೆ ಅಂತ ಹೇಳಿದ್ದರು. ಅಲ್ಲದೆ ಬ್ರಿಟನ್ ಅಧಿಕಾರಿಗಳ ಪ್ರಕಾರ ಅಸಲಿ ಕೊರೋನಾಗಿಂತ ಈ ಕೊರೋನಾ ಶೇ.70ರಷ್ಟು ಹೆಚ್ಚು ಹರಡುವಿಕೆಯ ದರ ಹೊಂದಿದೆ.

-masthmagaa.com

Contact Us for Advertisement

Leave a Reply