ನಾಗಾಲ್ಯಾಂಡ್‌ನಲ್ಲಿ ಪೊಲಿಟಿಕಲ್ ಹೈಡ್ರಾಮ! ಕ್ಷಣ ಮಾತ್ರದಲ್ಲಿ ಕರಗಿ ಹೋದ ಪಕ್ಷ!

masthmagaa.com:

ನಾಗಾಲ್ಯಾಂಡ್‌ ರಾಜಕೀಯದಲ್ಲಿ ಅತ್ಯಂತ ಮಹತ್ತರವಾದ ಬೆಳವಣಿಗೆ ನಡೆದಿದೆ. ನಾಗಾ ಪೀಪಲ್ಸ್‌ ಫ್ರಂಟ್‌ ಪಕ್ಷದ 25 ಶಾಸಕರ ಪೈಕಿ 21 ಮಂದಿ ಶಾಸಕರು ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಗೆ ಸೇರಿದ್ದಾರೆ. ಇದು ಮುಂದಿನ ವರ್ಷನಡೆಯಲಿರುವ ಅಸೆಂಬ್ಲಿ ಚುನಾವಣೆಯ ಮೇಲೆ ಪರಿಣಾಮ ಬೀರುತ್ತೆ. ಮೊನ್ನೆಯಷ್ಟೇ ಎನ್‌ ಪಿ ಎಫ್‌ ಮುಂದಿನ ವರ್ಷದ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸ್ತೇವೆ ಅಂತ ಅನೌನ್ಸ್ ಮಾಡಿತ್ತು. ಇದರ ಬೆನ್ನಲ್ಲೇ ಅವರ ಪಕ್ಷವೇ ಒಡೆದು ಹೋಗಿದೆ. ಎನ್‌ಪಿಎಫ್ 21 ಶಾಸಕರ ಸೇರ್ಪಡೆಯಿಂದ ಮುಖ್ಯಮಂತ್ರಿ ನೆಫಿಯು ರಿಯೊ ಅವರ ಎನ್‌ಡಿಪಿಪಿಯ ಶಾಸಕರ ಬಲ ಅಚಾನಕ್ಕಾಗಿ 42ಕ್ಕೆ ಏರಿಕೆಯಾಗಿದೆ. ಇದರ ಮೂಲಕ 60 ಸದಸ್ಯರ ವಿಧಾನಸಭೆಯಲ್ಲಿ ಎನ್‌ಡಿಪಿಪಿಯ ಸದಸ್ಯರೆ 42 ಜನ ಇದ್ದಂತಾಗಿದೆ. ಅಂದಹಾಗೆ ನಾಗಾಲ್ಯಾಂಡ್‌ನಲ್ಲಿ ಎನ್‌ಡಿಎ ಮೈತ್ರಿ ಕೂಟ ಸರ್ಕಾರ ಇದೆ. ಇದರಲ್ಲಿ ಬಿಜೆಪಿ 12 ಸೀಟನ್ನ ಹೊಂದಿದ್ದು ಈ ಮೂಲಕ ಸರ್ಕಾರದ ಭಾಗವಾಗಿದೆ.

-masthmagaa.com

Contact Us for Advertisement

Leave a Reply