“ಮೋದಿಯ ಈ ಪ್ರಯೋಗ ರಾಷ್ಟ್ರೀಯ ಭದ್ರತೆಗೆ ಹಾಗೂ ಯುವಕರ ಭವಿಷ್ಯಕ್ಕೆ ಅಪಾಯಕಾರಿ” ಎಂದ ರಾಹುಲ್

masthmagaa.com:

ಕೇಂದ್ರ ಸರ್ಕಾರದ ಅಗ್ನಿಪಥ್‌ ಯೋಜನೆಯ ವಿರುದ್ದ ತಮ್ಮ ಟೀಕಾ ಪ್ರಹಾರ ಮುಂದುವರೆಸಿರೋ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಧಾನಿಯ ಈ ಪ್ರಯೋಗ ರಾಷ್ಟ್ರೀಯ ಭದ್ರತೆ ಮತ್ತು ಯುವಕರ ಭವಿಷ್ಯಕ್ಕೆ ಅಪಾಯಕಾರಿ ಅಂತ ವಾಗ್ದಾಳಿ ಮಾಡಿದ್ದಾರೆ. ಟ್ವೀಟ್‌ ಮಾಡಿರೋ ಅವರು ʻಪ್ರತಿ ವರ್ಷ ಅರವತ್ತು ಸಾವಿರ ಸೈನಿಕರು ರಿಟೈರ್ಡ್‌ ಆಗ್ತಾರೆ, ಅದರಲ್ಲಿ ಕೇವಲ ಮೂರು ಸಾವಿರ ಜನರು ಮಾತ್ರ ಸರ್ಕಾರಿ ಉದ್ಯೋಗ ಪಡೀತಿದ್ದಾರೆ. ಇನ್ನು ನಿಮ್ಮ ಈ ನಾಲ್ಕು ವರ್ಷಗಳ ಗುತ್ತಿಗೆಯಲ್ಲಿ ನಿವೃತ್ತರಾಗುವ ಸಾವಿರಾರು ಅಗ್ನಿವೀರ್‌ರ ಭವಿಷ್ಯ ಏನಾಗಬಹುದುʼ ಅಂತ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಇಷ್ಟೆಲ್ಲಾ ಪರ ವಿರೋಧದ ನಡುವೆ ಕೂಡ ಅಗ್ನಿಪಥ್‌ ಯೋಜನೆಗೆ ಭರ್ಜರಿ ಯಶಸ್ಸು ಸಿಗ್ತಾಯಿದೆ. ಜುಲೈ 2 ರಂದು ಭಾರತೀಯ ನೌಕಾಪಡೆ ಆರಂಭಿಸಿದ್ದ ನೇಮಕಾತಿಗೆ ಇದುವರೆಗೂ ಸುಮಾರು 3ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ ಅಂತ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply