ಪಂಚೆಗೂ ದಂಡ..ಚಪ್ಲಿಗೂ ದಂಡ..! ಗಡ್ಕರಿ ಕೆಂಡ

ಕೇಂದ್ರದ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಿದ್ದೇ ಬಂದಿದ್ದು ಪೊಲೀಸರು ಸಿಕ್ ಸಿಕ್ಕಲ್ಲಿ ಅಡ್ಡಹಾಕಿ ಫೈನ್ ಹಾಕ್ತಿದ್ದಾರೆ. ಕಳೆದ ವಾರ ಲುಂಗಿ ಮತ್ತು ಚಪ್ಪಲ್ ಧರಿಸಿ ವಾಹನ ಚಲಾಯಿಸಿದ್ದಕ್ಕೆ ದಂಡ ಹಾಕಲಾಗಿದೆ ಅನ್ನೋ ಮಾತು ಕೇಳಿಬಂದಿತ್ತು. ಆದ್ರೆ ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಸಿ ಎಚ್ಚರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವದಂತಿಗಳಿಂದ ಎಚ್ಚರವಾಗಿರಿ.. ಲುಂಗಿ, ಬನಿಯನ್ ಹಾಕಿದ್ದಕ್ಕಾಗಲೀ, ಟೀ ಶರ್ಟ್ ಹಾಕಿದ್ದಕ್ಕಾಗಲೀ ದಂಡ ವಿಧಿಸಲು ಅವಕಾಶ ಇಲ್ಲ. ವಾಹನದಲ್ಲಿ ಹೆಚ್ಚುವರಿ ಬಲ್ಬ್ ಇಲ್ಲದಿರೋದಕ್ಕೆ, ಗ್ಲಾಸ್ ಮಣ್ಣಾಗಿರೋದಕ್ಕೆ ದಂಡ ವಿಧಿಸಲು ಯಾವುದೇ ಅವಕಾಶವಿಲ್ಲ ಎಂದಿದ್ದಾರೆ. ಅಲ್ಲದೆ ಈ ರೀತಿ ವದಂತಿ ಸುದ್ದಿಗಳನ್ನು ಬಿತ್ತರಿಸೋ ಮಾಧ್ಯಮಗಳ ಮೇಲೂ ನಿತಿನ್ ಗಡ್ಕರಿ ಕೆಂಡಕಾರಿದ್ದಾರೆ. ರಸ್ತೆ ಸುರಕ್ಷೆಯಂತಹ ಗಂಭೀರ ವಿಚಾರವನ್ನು ಮಾಧ್ಯಮಗಳು ಕಾಮಿಡಿ ಮಾಡಿವೆ. ಇದು ನನಗೆ ತುಂಬಾ ಬೇಸರವಾಗುತ್ತಿದೆ. ಜನರ ಜೀವನಕ್ಕೆ ಸಂಬಂಧಿಸಿದ ಈ ವಿಚಾರದಲ್ಲಿ ದಯವಿಟ್ಟು ತಪ್ಪು ಮಾಹಿತಿ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

Contact Us for Advertisement

Leave a Reply